Select Page

Advertisement

ಐಫೋನ್ ಯಾಕೆ ತಗೊಂಡಿ ಅಂದಿದ್ದಕ್ಕ ಮನನೊಂದು ಆತ್ಮಹತ್ಯೆ

ಐಫೋನ್ ಯಾಕೆ ತಗೊಂಡಿ ಅಂದಿದ್ದಕ್ಕ ಮನನೊಂದು ಆತ್ಮಹತ್ಯೆ

ಬೆಳಗಾವಿ : ದಬಾರಿ ಬೆಲೆಯ ಐಫೋನ್ ಖರೀದಿ ಮಾಡಿದ್ದಕ್ಕೆ ಮಗನಿಗೆ ತಂದೆ ಪ್ರಶ್ನೆ ಮಾಡಿದ್ದಕ್ಕೆ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನ್ಯೂ ವೈಭವ ನಗರದಲ್ಲಿ ನಡೆದಿದೆ.

ಮುಸ್ತಫೀಸ್ ಅಬ್ದುಲ್ ರಶೀದ್ ಶೇಖ್(24) ಆತ್ಮಹತ್ಯೆ ಮಾಡಿಕೊಂಡ ಯುವಕ. ಗುರುವಾರ ಸಂಜೆ ಇಎಂಐ ಮಾಡಿಸಿ 70ಸಾವಿರ ಬೆಲೆಯ ದುಬಾರಿ ಐಫೋನ್‌ ತಂದಿದ್ದ ಮುಸ್ತಫೀಸ್ ಶೇಖ್.

ತಂದೆಗೆ ಈ ವಿಚಾರ ಗೊತ್ತಾಗಿ ಇಷ್ಟೊಂದು ಹಣ ಕೊಟ್ಟು ಯಾಕೆ ಮೊಬೈಲ್ ತಗೊಂಡು ಬಂದೆ. ಕಡಿಮೆ ದರದ ಮೊಬೈಲ್ ‌ಖರೀದಿಸಬೇಕಿತ್ತು ಎಂದು ಬುದ್ಧಿವಾದ ಹೇಳಿದ್ದಕ್ಕೆ ಮನನೊಂದು ಮನೆಯ ರೂಮ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!