ಶಾಸಕ ರಾಜು ಕಾಗೆ ಸಹೋದರ ಪುತ್ರನ ಕಾರು ಅಫಘಾತ : ಯುವಕ ಸಾವು
ಚನ್ನಮ್ಮನ ಕಿತ್ತೂರು: ಇಲ್ಲಿಯ ರಾಷ್ಟ್ರೀಯ ಹೆದ್ದಾರಿ ಮೇಲೆ ಬೆಳಗಾವಿಯಿಂದ ಕಿತ್ತೂರು ಕಡೆ ಬರುತ್ತಿರುವ ಬೈಕ್ ಗೆ ಶಾಸಕ ರಾಜು ಕಾಗೆ ಸಹೋದರ ಪುತ್ರನ ಕಾರು ಡಿಕ್ಕಿ ಹೊಡೆದು ಒರ್ವ ಯುವಕ ಮೃತ ಪಟ್ಟಿದ್ದಾನೆ.
ಗೋಕಾರ ತಾಲೂಕಿನ ಪುಡುಕಲಕಟ್ಟಿ ಗ್ರಾಮದ ಬಸವರಾಜ ರಾಮಪ್ಪ ತಳಕಟನಾಳ (24) ಮೃತ ಯುವಕ. ಮಕ್ಕಳಗೇರಿ ಗ್ರಾಮದ ಸಣ್ಣವಿಠ್ಠಲ್ ದುರದುಂಡಿ (30) ಹಾಗೂ ಮೂಡಲಗಿ ತಾಲೂಕಿನ ನಾಗನೂರ ಗ್ರಾಮದ ನಿಂಗಪ್ಪ ಹೆಬ್ಬಾಳ (30) ಇಬ್ಬರಿಗೂ ಗಂಭೀರ ಗಾಯವಾಗಿದ್ದು, ಇವರು ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದೇ ಬೈಕ್ ನಲ್ಲಿ ಮೂವರು ಸಂಚರಿಸುತ್ತಿದ್ದರು.
ಈ ಮೂವರು ತಿಗಡೊಳ್ಳಿಯ ರಸ್ತೆಯಲ್ಲಿ ಪ್ರಾರಂಭವಾಗಿರುವ ಕೆರೆ ತುಂಬುವ ಯೋಜನೆ ಕಾಮಗಾರಿಯಲ್ಲಿ ಈ ಯುವಕರು ಕೆಲಸ ಮಾಡುತ್ತಿದ್ದರು. ತಮ್ಮ ಕೆಲಸ ಮೇಲೆ ಹಟ್ಟಿಹೊಳಿ ಗ್ರಾಮಕ್ಕೆ ತೆರಳಿದ್ದರು. ಮರಳಿ ಕಿತ್ತೂರು ಪಟ್ಟಣಕ್ಕೆ ಬರುತ್ತಿರುವಾಗ ಈ ಅವಘಡ ಸಂಭವಿಸಿದೆ.
ಶಾಸಕ ರಾಜು ಕಾಗೆ ಸಹೋದರನ ಪುತ್ರ ಶ್ರೀಪ್ರಸಾದ್ ಕಾಗೆ, ಬೈಕ್ ಚಾಲಕ ಸಣ್ಣವಿಠ್ಠಲ್ ದುರದುಂಡಿ ಮೇಲೆ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ 2023 ಕಾಯ್ದೆಯಡಿ 281, 125(a), 125(b), 106 ಕೇಸ್ ದಾಖಲು ಮಾಡಲಾಗಿದೆ.
ಘಟನಾ ಸ್ಥಳಕ್ಕೆ ಕಿತ್ತೂರು ಪಿಎಸ್ಐ ಪ್ರವೀಣ ಗಂಗೋಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


