ಬೆಂಗಳೂರು : ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಉಚ್ಚಾಟನೆ ನಂತರ ಸಧ್ಯ ರಾಜ್ಯ ಬಿಜೆಪಿಯಲ್ಲಿ ಸಾಕಷ್ಟು ಬದಲಾವಣೆ ಆಗುತ್ತಿವೆ.‌ ಈ ಮಧ್ಯೆ ಪರೋಕ್ಷವಾಗಿ ಯತ್ನಾಳ್ ಬಣದ ಜೊತೆ ಗುರುತಿಸಿಕೊಂಡಿದ್ದ ಒಬ್ಬೊಬ್ಬ ನಾಯಕರು ಅಂತರ ಕಾಯ್ದುಕೊಳ್ಳುತ್ತಿದ್ದಾರೆ.

ಕಾಂಗ್ರೆಸ್ ವಿರುದ್ಧ ಬೆಲೆ ಏರಿಕೆ ವಿರೋಧಿಸಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಮ್ಮಿಕೊಳ್ಳಲಿರುವ ಬೃಹತ್ ಪ್ರತಿಭಟನೆಗೆ ರಾಮಲು ಜೈ ಎಂದಿದ್ದಾರೆ. ಸಧ್ಯದ ಬೆಳವಣಿಗೆ ಕುರಿತು ಇಂದು ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವ ಮೂಲಕ ರಾಮಲು ಸಂದೇಶ ರವಾನಿಸುವ ಕೆಲಸ ಮಾಡಿದ್ದಾರೆ.

ಈ ಹಿಂದೆ ಸಂಡೂರು ಉಪ ಚುನಾವಣೆ ನಂತರದ ಸೋಲನ್ನು ರಾಮಲು ಹೆಗಲಿಗೆ ಕಟ್ಟುವ ಪ್ರಯತ್ನ ವಿರೋಧಿ ಬಿಜೆಪಿ ತೊರೆಯುವ ಚಿಂತನೆಯನ್ನು ರಾಮಲು ಮಾಡಿದ್ದರು. ಅಷ್ಟೇ ಅಲ್ಲದೆ ರಾಜ್ಯಾಧ್ಯಕ್ಷ ಸ್ಥಾನದ ಮೇಲೆಯೂ ಕಣ್ಣಿಟ್ಟು ಹೇಳಿಕೆ‌ ನೀಡಿದ್ದರು. ಸಧ್ಯ ಬಿಎಸ್ವೈ ಭೇಟಿ ಮಾಡಿದ್ದು, ಮತ್ತೆ ಹಳೇ ಜೋಡಿ ಒಂದಾಗುವ ಲಕ್ಷಣ ಕಂಡುಬರುತ್ತಿದೆ.