ಬಬಲಾದಿ ಮಠದ ಸ್ವಾಮೀಜಿ ಬಂಧನ ; ಹಣ ಬಂದಿದ್ದು ಎಲ್ಲಿಂದ
ಬೆಳಗಾವಿ : ಬ್ಯಾಂಕ್ ವಂಚನೆ ಮಾಡಿದ್ದ ಆರೋಪಿಯಿಂದ ದೇಣಿಗೆ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಬಲಾದಿ ಮಠದ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದ್ದಾರೆ.
ಜಮಖಂಡಿಯ ಹೊಸ ಬಬಲಾದಿ ಮಠದ ಮುತ್ಯಾ ಸದಾಶಿವ ಹಿರೇಮಠ ಅವರನ್ನು ಪೊಲೀಸರು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಆರ್ಥಿಕವಾಗಿ ದಿವಾಳಿಯಾಗಿರುವ ಗೋಕಾಕನ ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ವಂಚನೆ ಮಾಡಿದ್ದ ಆರೋಪಿ ಸ್ವಾಮಿಜಿ ಖಾತೆಗೆ ಹಣ ಹಾಕಿದ್ದು ಬೆಳಕಿಗೆ ಬಂದಿದೆ.
ಆರೋಪಿಯೊಬ್ಬರಿಂದ ಸ್ವಾಮೀಜಿ ಸುಮಾರು 80 ಲಕ್ಷ ರೂಪಾಯಿ ದೇಣಿಕೆ ಪಡೆದುಕೊಂಡಿದ್ದರೆಂಬ ಮಾಹಿತಿ ಲಭ್ಯವಾದ ಹಿನ್ನಲೆಯಲ್ಲಿ ಸಿಐಡಿ ತನಿಖೆಯಲ್ಲಿ ಹಣ ಪಡೆದ ಬಗ್ಗೆ ಗೊತ್ತಾಗಿ ಸ್ವಾಮೀಜಿ ವಿಚಾರಣೆ ಮಾಡಲಾಗಿತ್ತು.
ಸ್ವಾಮೀಜಿಯನ್ನು ಬಂಧಿಸಿ ಸಿಐಡಿ ಪೊಲೀಸರು ಗೋಕಾಕ್ ಠಾಣೆಗೆ ಕರೆತಂದು ವಿವಾರಣೆ ನಡೆಸಿದ್ದಾರೆ.

