ಚಿಕಿತ್ಸೆಗೆಂದು ವೃದ್ಧರನ್ನು ಕರೆತಂದು ಆಸ್ಪತ್ರೆಯಲ್ಲೇ ಬಿಟ್ಟು ಹೋಗುವ ಮಕ್ಕಳು ; ವೃದ್ಧಾಶ್ರಮವಾದ ಬಿಮ್ಸ್ ಆಸ್ಪತ್ರೆ
ಬೆಳಗಾವಿ : ಬೆಳಗಾವಿ ಬಿಮ್ಸ್ ಆಸ್ಪತ್ರೆಯಾ ಅಥವಾ ವೃದ್ಧಾಶ್ರಮವಾ ಎಂಬ ಅನುಮಾನ ಮೂಡುತ್ತಿದೆ. ಚಿಕಿತ್ಸೆಗೆಂದು ಹೆತ್ತ ತಂದೆ ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬರುವ ಮಕ್ಕಳು ಇಲ್ಲಿಯೇ ಬಿಟ್ಟು ಹೋಗುತ್ತಿರುವುದು ಗಮನಕ್ಕೆ ಬಂದಿದೆ.
ಹೌದು ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಕಳೆದ ಎರಡು ವರ್ಷದಲ್ಲಿ ಸುಮಾರು 152 ವೃದ್ಧರನ್ನು ಮಕ್ಕಳು ಬಿಟ್ಟು ಹೋಗಿದ್ದಾರೆ. ನಾನಾ ಕಾರಣಕ್ಕೆ ಆಸ್ಪತ್ರೆಗೆ ಹೆತ್ತವರನ್ನು ಕರೆತರುವ ಮಕ್ಕಳು ನಂತರ ಅವರನ್ನು ಅಲ್ಲಿಯೇ ಬಿಟ್ಟು ಹೋಗುತ್ತಿರುವುದು ಸಾಮಾನ್ಯವಾಗಿದೆ.
ಈವರೆಗೂ ಬಿಮ್ಸ್ ಆಸ್ಪತ್ರೆಯಲ್ಲಿ ಸುಮಾರು 17 ಕ್ಕೆ ಹೆಚ್ಚು ಹೊರರಾಜ್ಯದ ವೃದ್ಧರನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋಗಿದ್ದರು. ನಂತರ ಮನೆಯವರನ್ನು ಸಂಪರ್ಕ ಮಾಡಿ ಅವರನ್ನು ವಾಪಸ್ ಕಳುಹಿಸುವ ಕೆಲಸವನ್ನು ಬಿಮ್ಸ್ ಆಸ್ಪತ್ರೆ ಸಿಬ್ಬಂದಿ ಮಾಡಿದ್ದಾರೆ.
ಇನ್ನೂ ನಮ್ಮ ರಾಜ್ಯ ಸೇರಿದಂತೆ ಹೊರ ರಾಜ್ಯಗಳ ಸುಮಾರು 73 ವೃದ್ಧರನ್ನು ಅವರ ಮನೆಯವರಿಗೆ ಸಂಪರ್ಕ ಮಾಡಿ ಕಳುಹಿಸುವ ಕೆಲಸ ಮಾಡಿದ್ದಾರೆ. ಆಸ್ಪತ್ರೆಗೆ ಚಿಕಿತ್ಸೆಗೆ ಬಂದು ವಾಪಸ್ ಅಲ್ಲಿಯೇ ಬಿಟ್ಟು ಈ ದುರುಳರು ಹೋಗಿದ್ದರು.
ಅಪಘಾತಕಾರಿ ವಿಷಯ ಏನೆಂದರೆ 62 ವೃದ್ಧರಿಗೆ ಮನೆಯಲ್ಲಿ ಮಕ್ಕಳು, ಬಂಧು ಬಳಗದವರು ಹಾಗೆಯೇ ಆಸ್ತಿ ಇದ್ದರು ವೃದ್ಧರನ್ನು ಕರೆತರಲು ಬರದ ಕಿರಾತಕರೂ ಇದ್ದಾರೆ. ಇಂತಹವರನ್ನು ವಿವಿಧ ಅನಾಥಾಶ್ರಮಗಳಿಗೆ ಕಳುಹಿಸಿಕೊಡಲಾಗಿದೆ ಎಂದು ಆಸ್ಪತ್ರೆ ವೈದ್ಯಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.


