Select Page

Advertisement

ಅಥಣಿ ನ್ಯಾಯಾಧೀಶರ ಮನೆಯಲ್ಲಿ ಕಳ್ಳತನ ; ಆರೋಪಿ ಬಂಧನ

ಅಥಣಿ ನ್ಯಾಯಾಧೀಶರ ಮನೆಯಲ್ಲಿ ಕಳ್ಳತನ ; ಆರೋಪಿ ಬಂಧನ

ಅಥಣಿ : ನ್ಯಾಯಾಧೀಶರ ಮನೆಗೆ ನುಗ್ಗಿ ಚಿನ್ನಾಭರಣ ಕಳ್ಳತನ ಮಾಡಿ ಪರಾರಿ ಆಗಿದ್ದ ಅಂತರರಾಜ್ಯ ಕಳ್ಳನನ್ನು ‌ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಳೆದ ಡಿಸೆಂಬರ್ 22 ರಂದು ಅಥಣಿ ನ್ಯಾಯಾಧೀಶರ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದ ಮಹಾರಾಷ್ಟ್ರದ ಮಿರಜ್ ನ ಕದಮವಾಡಿಯ ಆರೋಪಿ ಅರ್ಜುನ್ ನಬಿಸಾಭ್ ಭೋಸಲೆ ಪರಾರಿ ಆಗಿದ್ದ.‌

ಬಂಧಿತ ಆರೋಪಿಯಿಂದ‌ 14.40 ಲಕ್ಷ ‌ಮೌಲ್ಯದ 180 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಆರೋಪಿ ಈ ಹಿಂದೆ ಅಥಣಿ, ಕಾಗವಾಡ, ಐಗಳಿ ಹಾಗೂ ಘಟಪ್ರಭಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದರೋಡೆ, ಸುಲಗೆ ಸೇರಿ ಹತ್ತು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ.

ಆರೋಪಿಯನ್ನು ಐಗಳಿ, ಕಾಗವಾಡ, ಅಥಣಿ ಠಾಣೆಗಳ ಪೊಲೀಸರ ನೇತೃತ್ವದ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!