ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ್ದ ಕಾಂಗ್ರೆಸ್ ಕಾರ್ಯಕರ್ತೆ ಶವ ಸೂಟ್ ಕೇಸ್ ನಲ್ಲಿ ಪತ್ತೆ
ಹರಿಯಾಣ : ಹರಿಯಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತೆಯ ಶವ ಸೂಟ್ ಕೇಸ್ ನಲ್ಲಿ ಪತ್ತೆಯಾಗಿದೆ. ಕೂಲೆಯಾದ ಕಾರ್ಯಕರ್ತೆಯನ್ನು ಹಿಮಾನಿ ನರ್ವಾಲ್ ಎಂದು ಗುರುತಿಸಲಾಗಿದೆ.
ಇದೇ ವಿಚಾರ ರಾಜಕೀಯ ವಲಯದಲ್ಲಿ ಕೋಲಾಹಲ ಸೃಷ್ಟಿಸಿದೆ. ಹಿಮಾನಿ ನರ್ವಾಲ್ ಕಾಂಗ್ರೆಸ್ಸಿನ ಪ್ರಸಿದ್ಧ ಯುವ ನಾಯಕಿಯಾಗಿದ್ದರು ಮತ್ತು ಅನೇಕ ದೊಡ್ಡ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.
ಹಿಮಾನಿ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯಲ್ಲೂ ಭಾಗವಹಿಸಿದ್ದರು ಮತ್ತು ಪಕ್ಷದ ಇತರ ಹಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು . ಮೂಲಗಳ ಪ್ರಕಾರ, ಹಿಮಾನಿ ನರ್ವಾಲ್ ಕಾಂಗ್ರೆಸ್ ಚುನಾವಣಾ ಪ್ರಚಾರಗಳಲ್ಲಿಯೂ ಸಕ್ರಿಯರಾಗಿದ್ದರು. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ, ಅವರು ಪ್ರಚಾರಕ್ಕಾಗಿ ಮುಂಬೈಗೆ ಹೋಗಿದ್ದರು.
ಪೊಲೀಸರು ಈ ವಿಷಯವನ್ನು ಗಂಭೀರವಾಗಿ ತನಿಖೆ ನಡೆಸುತ್ತಿದ್ದು, ಕೊಲೆಗೆ ಕಾರಣವೇನು ಮತ್ತು ಇದರಲ್ಲಿ ಯಾರೆಲ್ಲಾ ಭಾಗಿಯಾಗಿರಬಹುದು ಎಂದು ತನಿಖೆ ಕೈಗೊಂಡಿದ್ದಾರೆ . ಪ್ರಾಥಮಿಕ ತನಿಖೆಯ ಪ್ರಕಾರ, ಇದು ಯೋಜಿತ ಕೊಲೆ ಎಂದು ಶಂಕಿಸಲಾಗಿದೆ.
.


