ಮೂಡಲಗಿಯಲ್ಲಿ ಆತಂಕ ; ಉದ್ಯಮಿಯನ್ನು ಅಪಹರಿಸಿ 5 ಕೋಟಿ ಹಣಕ್ಕೆ ಬೇಡಿಕೆ
ಬೆಳಗಾವಿ : ಸಿನಿಮೀಯ ರೀತಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಅಪಹರಣ ಮಾಡಿ ಐದು ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣ ಬೆಳಕಿಗೆ ಬಂದಿದೆ. ಜಿಲ್ಲೆಯ ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದ ನಿವಾಸಿ ಬಸವರಾಜ್ ತಳವಾರ (48) ಅಪಹರಣಕ್ಕೆ ಒಳಗಾದ ವ್ಯಕ್ತಿ.
ಫೆ.14 ರ ರಾತ್ರಿ ಬಸವರಾಜ್ ಅವರನ್ನು ದಂಡಾಪುರ ಕ್ರಾಸ್ ಬಳಿ ಅಪಹರಣ ಮಾಡಲಾಗಿದೆ. ನಿನ್ನೆ ತಡರಾತ್ರಿ ಐದು ಕೋಟಿ ಹಣವನ್ನು ಕೊಟ್ಟು ಬಸವರಾಜ್ ನನ್ನು ಬಿಡಿಕೊಂಡು ಹೋಗುವಂತೆ ಕಿಡಿಗೇಡಿಗಳು ಬ್ಲಾಕ್ ಮೇಲ್ ಮಾಡಿದ್ದಾರೆ.
ಈ ಕುರಿತು ಕುಟುಬಸ್ಥರು ಘಟಪ್ರಭಾ ಠಾಣೆಗೆ ದೂರು ನೀಡಿದ್ದಾರೆ. ಸಧ್ಯ ಫೋನ್ ಲೊಕೇಷನ್ ಆಧರಿಸಿ ಕಿಡ್ನಾಪರ್ಸ್ ಬೇಟೆಗೆ ಘಟಪ್ರಭಾ ಪೊಲೀಸರು ಸಜ್ಜಾಗಿದ್ದಾರೆ. ಕಿಡ್ನಾಪರ್ಸ್ ತಂಡ ನಿಪ್ಪಾಣಿಯಲ್ಲಿರುವ ಮಾಹಿತಿ ದೊರೆತಿದ್ದು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.


