ಬಿಮ್ಸ್ ನಲ್ಲಿ ನಿಲ್ಲದ ಸಾವಿನ ಸರಣಿ ; ಉಸಿರು ಚೆಲ್ಲಿದ ಬಾಣಂತಿ
ಬೆಳಗಾವಿ : ಬಿಮ್ಸ್ ನಲ್ಲಿ ಬಾಣಂತಿಯರ ಸಾವಿನ ಸರಣಿ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ದಿನದಿಂದ ದಿನಕ್ಕೆ ಸಾವಿಣ ಸಂಖ್ಯೆ ಅಧಿಕವಾಗುತ್ತಿದ್ದು, ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬೆಳಗಾವಿ ತಾಲೂಕಿನ ಕರಡಿಗುದ್ದಿ ಗ್ರಾಮದ ನಿವಾಸಿ ಗಂಗವ್ವಾ ಗೊಡಕುಂದ್ರಿ (31) ಮೃತ ಬಾಣಂತಿ. ಕಳೆದ ಎರಡು ದಿನಗಳ ಹಿಂದೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಆಗಿದ್ದು ನಂತರ ಏಕಾಏಕಿ ಅನಾರೋಗ್ಯದಿಂದ ಸಾವಣಪ್ಪಿದ್ದಾರೆ.
ಬಾಣಂತಿ ಸಾವಿಗೆ ವೈದ್ಯರು ನಿರ್ಲಕ್ಷ್ಯ ಕಾರಣ ಎಂದು ಹೇಳಲಾಗುತ್ತಿದೆ. ಹೆರಿಗೆ ನಂತರ ಆರೋಗ್ಯವಾಗಿದ್ದ ಗರ್ಭಿಣಿಗೆ ಏಕಾಏಕಿ ಆರೋಗ್ಯ ಕೈಕೊಟ್ಟಿದೆ. ಈ ಸಂದರ್ಭದಲ್ಲಿ ವೈದ್ಯರು ಸಹಿ ಮಾಡಿಸಿಕೊಂಡಿದ್ದು ಬಿಟ್ಟರೆ ಸರಿಯಾಗಿ ಚಿಕಿತ್ಸೆ ನೀಡಿಲ್ಲ ಎಂದು ಆರೋಪಿಸಿದ್ದಾರೆ.


