Select Page

Advertisement

ಗೆದ್ದು ಬೀಗಿದ ಸವದಿ ಬಣ ; ವಿಶ್ವಾಸ ಕಳೆದುಕೊಂಡ ಜಾರಕಿಹೊಳಿ ಆಪ್ತ

ಗೆದ್ದು ಬೀಗಿದ ಸವದಿ ಬಣ ; ವಿಶ್ವಾಸ ಕಳೆದುಕೊಂಡ ಜಾರಕಿಹೊಳಿ ಆಪ್ತ

ಅಥಣಿ : ರಾಜ್ಯದಲ್ಲಿ ಅತಿ ದೊಡ್ಡ ಗ್ರಾಮ ಪಂಚಾಯತಿ ಅಧ್ಯಕ್ಷರ ವಿರುದ್ಧ ಮಂಡಿಸಲಾದ ಅವಿಶ್ವಾಸ ಗೊತ್ತುವಳಿ ಸ್ವೀಕೃತಗೊಂಡಿದ್ದು, ರಮೇಶ್ ಜಾರಕಿಹೊಳಿ ಆಪ್ತ ಸಂತೋಷ ಕಕಮರಿ ಮುಖಭಂಗ ಅನುಭವಿಸುವಂತಾಗಿದೆ.

ಒಟ್ಟು 56 ಸದಸ್ಯರ ಪೈಕಿ 42 ಜನ ಸದಸ್ಯರು ಅವಿಶ್ವಾಸ ಪರವಾಗಿ ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿದರು, 14 ಸದಸ್ಯರ ಗೈರಾಗಿದ್ದರು. ಒಂದು ವಾರದಿಂದ 25 ಸದಸ್ಯರು ಸಂತೋಷ ಕಕಮರಿ ಬೆಂಬಲಿಸಿ ಪ್ರವಾಸಕ್ಕೆ ತೆರಳಿದ್ದರು. ಆದರೆ ಅವರುಗಳ ಜೊತೆಯಲ್ಲಿ ಇದ್ದವರಲ್ಲಿಯೇ ಐದು ಜನ ಬಂಡಾಯವೆಂದು ಪಕ್ಷಾಂತರ ಗೊಂಡ ಪರಿಣಾಮ ಹಿನ್ನಡೆ ಅನುಭವಿಸ ಬೇಕಾಯಿತು.

ಬಿಜೆಪಿ ಪ್ರಮುಖರ ಸಹಕಾರ ದೊರೆಯದಕ್ಕೆ ಅಧಿಕಾರ ವಿರುವ ಸರಕಾರದ ಅನುದಾನದ ಭರವಸೆ ಮೇರೆಗೆ ಪಕ್ಷಾತೀತವಾಗಿ ಸದಸ್ಯರುಗಳು ಅವಿಶ್ವಾಸ ಪರ ಮತ ಚಲಾಯಿಸಿದರು ಎನ್ನಲಾಗುತ್ತಿದೆ. ಈ ವೇಳೆ ಅಧಿಕಾರಿಗಳಾದ ಚಿಕ್ಕೋಡಿ

ಎಸಿ ಸುಭಾಷ್ ಸಂಪಗಾವಿ, ಸಂಕೋನಟ್ಟಿ ಪಿಡಿಓ ಬೀರಪ್ಪ ಗಡಗಂಚಿ, ಅಥಣಿ ಕಂದಾಯ ನೀರಕ್ಷಕ ಶಿವಾನಂದ ಮೆಣಸಂಗಿ, ಎಮ್ ಎಮ್ ಮಿರ್ಜಿ, ಸಿಬ್ಬಂದಿಗಳಾದ ಅನೀಲ,ವಿಶಾಲ,ಮಲಯ್ಯ ಹೀರೆಮಠ ಸೇರಿದಂತೆ ಅನೇಕರಿದ್ದರು.

ಎರಡು ಗುಂಪುಗಳ ನಡುವೆ ಯಾವುದೇ ತರಹದ ಗಲಾಟೆಗೆ ಆಸ್ಪದ ಆಗದ ಹಾಗೆ ಪೋಲಿಸ್ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಅಥಣಿ ಪಿಎಸ್ಆಯ್ ಶಿವಾನಂದ ಕಾರಜೋಳ, ಐಗಳಿ ಪಿಎಸ್ಆಯ್ ಹಾಡಕರ, ಸಿಬ್ಬಂದಿ ಶ್ರೀಧರ ಭಾಂಗಿ, ಮಹಾತೇಶ ಖೋತ, ಸುಧಾಕರ ಕಾಂಬಳೆ, ಸೂರ್ಯವಂಶಿ ಇದ್ದರು.

Advertisement

Leave a reply

Your email address will not be published. Required fields are marked *

error: Content is protected !!