ಕಿತ್ತೂರು ಶಾಸಕರಿಗೆ ಬಿಜೆಪಿ 100 ಕೋಟಿ ಆಫರ್..? ಕಾಂಗ್ರೆಸ್ ಶಾಸಕನ ಸ್ಪೋಟಕ ಹೇಳಿಕೆ
ಬೆಂಗಳೂರು : ಆಪರೇಷನ್ ಕಮಲದ ಭೀತಿ ಕಾಂಗ್ರೆಸ್ ಗೆ ಇನ್ನೂ ಕಾಡುತ್ತಿದೆಯಾ ಎಂಬ ಅನುಮಾನ ಬಲವಾಗಿ ಮೂಡುತ್ತಿದೆ. ಈ ಮಧ್ಯೆ ಕಾಂಗ್ರೆಸ್ ಶಾಸಕ ರವಿ ಗಣಿಗ ಸ್ಪೋಟಕ ಮಾಹಿತಿ ಒಂದನ್ನು ಹೊರಹಾಕಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಹಾಗೂ ಜೆಡಿಎಸ್ ಪ್ರಯತ್ನ ನಡೆಸಿದ್ದು, ಇಬ್ಬರು ಕಾಂಗ್ರೆಸ್ ಶಾಸಕರಿಗೆ ಬಿಜೆಪಿ 100 ಕೋಟಿ ಆಫರ್ ಮಾಡಿದೆ. ಈ ಕುರಿತು ಮಹತ್ವದ ದಾಖಲೆ ಇದೆ ಬಿಡುಗಡೆ ಮಾಡುವೆ ಎಂದು ರವಿ ಗಣಿಗ ಹೇಳಿಕೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆ ಕಿತ್ತೂರು ಕಾಂಗ್ರೆಸ್ ಶಾಸಕ ಬಾಬಾಸಾಹೇಬ್ ಪಾಟೀಲ್ ಹಾಗೂ ಚಿಕ್ಕಮಗಳೂರು ಶಾಸಕ ಎಚ್.ಡಿ ತಮ್ಮಯ್ಯ ಅವರಿಗೆ ಬಿಜೆಪಿಯಿಂದ ₹ 100 ಕೋಟಿ ಆಫರ್ ಮಾಡಲಾಗಿದೆ ಎಂದು ಸ್ಪೋಟಕ ಹೇಳಿಕೆಯನ್ನು ಶಾಸಕ ರವಿ ಗಣಿಗ ನೀಡಿದ್ದಾರೆ.
ಕಳೆದ ವರ್ಷ ಕಿತ್ತೂರು ಉತ್ಸವಕ್ಕೆ ಅನುದಾನ ನೀಡುವ ವಿಚಾರವಾಗಿ ಶಾಸಕ ಬಾಬಾಸಾಹೇಬ್ ಪಾಟೀಲ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಜೊತೆಗೆ ಬೊಮ್ಮಾಯಿ ಸರ್ಕಾರ ಇದ್ದಾಗ ಐದು ಕೋಟಿ ಅನುದಾನ ನೀಡಿತ್ತು, ನಮ್ಮ ಸರ್ಕಾರ ಕೇವಲ ಎರಡು ಕೋಟಿ ನೀಡಿದೆ ಎಂದು ಹೇಳಿದ್ದರು. ಸಧ್ಯ ಇವರಿಗೆ ಬಿಜೆಪಿ 100 ಕೋಟಿ ಆಫರ್ ಮಾಡಿತಾ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಜೋರಾಗಿ ಕೇಳಿಬರುತ್ತಿದೆ.


