Select Page

Advertisement

ಮಾಳು ನಿಪನಾಳ ರೌಡಿಸಂ ; ಎಸ್ಪಿ ಕೊಟ್ಟ ಎಚ್ಚರಿಕೆ ಏನು…?

ಮಾಳು ನಿಪನಾಳ ರೌಡಿಸಂ ; ಎಸ್ಪಿ ಕೊಟ್ಟ ಎಚ್ಚರಿಕೆ ಏನು…?

ಬೆಳಗಾವಿ : ನಾ ಡ್ರೈವರ ಹಾಡಿನ ಮೂಲಕ ಹೆಸರು ಮಾಡಿದ್ದ ಮಾಳು ನಿಪನಾಳನ ಅಸಲಿ ಮುಖ‌ ಈಗ ಬಹಿರಂಗಗೊಂಡಿದೆ. ಅನವಶ್ಯಕವಾಗಿ ಮಹಿಳೆ ಹಾಗೂ ಯುವಕನ ಮೇಲೆ ಹಲ್ಲೆ ಮಾಡಿರುವ ಈತನ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಜನಸಾಮಾನ್ಯರ ಆಗ್ರಹವಾಗಿದೆ.

ಸಧ್ಯ ಈ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿರುವ ಬೆಳಗಾವಿ ಎಸ್ಪಿ ಭೀಮಾಶಂಕರ ಗುಳೆದ್ ಅವರು. ಜಾನಪದ ಕಲಾವಿದ ಮಾಳು ನಿಪನಾಳ ಎಂಬಾತ ಯಾವುದೋ ವಿಚಾರವಾಗಿ ಕೆಲಸವ ಮೇಲೆ ಹಲ್ಲೆ ಮಾಡಿರುವಂತದ್ದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ವಿಚಾರಿಸಿದಾಗ ಈತ ಹಲ್ಲೆ ಮಾಡಿದ್ದು ಮೇಲ್ನೋಟಕ್ಕೆ ‌ನಿಜವಾಗಿದೆ.

ಈ ಪ್ರಕರಣದಲ್ಲಿ ನೊಂದ ಶೇಕಪ್ಪ ಹಕ್ಯಾಗೋಳ ಹಾಗೂ ಆತನ ಸಂಬಂಧಿಕರು ಚಿಕ್ಕೋಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ನೊಂದವರಿಗೆ ನಮ್ಮ ಪೊಲೀಸರು ಪೋನ್ ಮುಖಾಂತರ ಈ ಕುರಿತು ಪ್ರಕರಣ ದಾಖಲಿಸುವಂತೆ ಹೇಳಿದ್ದಾರೆ. ಅವರು ಸಧ್ಯ ನಾವು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆಮೇಲೆ ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾರೆ.

ಯಾರೂ ಕಾನೂನಿಗಿಂತ ಮೇಲಿನವರಲ್ಲ.‌ಯಾರೇ ಆಗಲಿ‌ ಕಾನೂನು ತಮ್ಮ‌ ಕೈಗೆ ತಗೆದುಕೊಂಡರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂಬ ಎಚ್ಚರಿಕೆ ನೀಡುತ್ತೇವೆ ಎಂದು ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೆದ್ ಅಭಿಪ್ರಾಯಪಟ್ಟರು.

ಏನಿದು ಪ್ರಕರಣ….? ಸೋಶಿಯಲ್ ಮೀಡಿಯಾದಲ್ಲಿ ಸ್ವಲ್ಪ ಹೆಸರು ಮಾಡಿದರೆ ಸಾಕು, ಸೊಕ್ಕು ನೆತ್ತಿಗೇರುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ನಾ ಡ್ರೈವರ ಹಾಡಿನ ಮೂಲಕ ಹೆಸರು ಮಾಡಿದ್ದ ಮಾಳು ನಿಪನಾಳ ವಿರುದ್ಧ ಮಹಿಳೆ ಹಾಗೂ ಓರ್ವ ಯುವಕನ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.

ಜಿಲ್ಲೆಯ ರಾಯಬಾಗ ತಾಲೂಕಿನ ನಿಪನಾಳ ಗ್ರಾಮದ ಹೊರವಲಯದಲ್ಲಿ ಯುವಕ ಹಾಗೂ ಆತನ ಸಹೋದರಿ ಬೈಕ್ ಮೇಲೆ ಸಂಚರಿಸುತ್ತಿದ್ದರು. ಈ ಸಂದರ್ಭದಲ್ಲಿ ಗಾಯಕ ಮಾಳು ನಿಪನಾಳ ಹಾಗೂ ಆತನ ಸ್ನೇಹಿತರು ಕಾರಿನಲ್ಲಿ ತೆರಳುವ ಸಂದರ್ಭದಲ್ಲಿ ಎದುರಿಗಿದ್ದ ಯುವಕನ ಬೈಕ್ ಮೈಮೇಲೆ ಹಾಕುವಂತೆ ಕಾರು ಓಡಿಸಿಸುತ್ತಿದ್ದರು.

ಈ ಸಂದರ್ಭದಲ್ಲಿ ಬೈಕ್ ಮೇಲಿದ್ದ ಮಹಿಳೆ ನೋಡಿಕೊಂಡು ಸಂಚರಿಸಿ ಎಂದು ಹೇಳುತ್ತಿದ್ದಂತೆ ಮಾಳು ನಿಪನಾಳ ಹಾಗೂ ಆತನ ಸ್ನೇಹಿತರು ಹಲ್ಲೆ ನಡೆಸಿದ್ದಾರೆ. ಇದರಿಂದ ವ್ಯಕ್ತಿಯ ತಲೆಗೆ ಗಂಭೀರವಾಗಿ ಗಾಯವಾಗಿದ್ದು ಯುವಕ ಹಾಗೂ ಆತನ ಸಹೋದರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸಾವಕಾಶವಾಗಿ ಕಾರು ಓಡಿಸಿ ಎಂದು ಹೇಳಿದ್ದೇ ತಡ, ಆರೋಪಿಗಳು ಹಲ್ಲೆಗೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಪ್ರಕರಣಕ್ಕೂ ಮೊದಲು ಗಾಯಕ ಮಾಳು ನಿಪನಾಳ ಮೇಲೆ ಮೂರು ಪ್ರಕರಣ ದಾಖಲಾಗಿದ್ದು, ಪೊಲೀಸರು ಕ್ರಮ ಕೈಗೊಳ್ಳುವಂತೆ ಜನ ಆಗ್ರಹಿಸಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!