ಅಥಣಿ : ಮನೆಗೆ ನುಗ್ಗಿ ಇಬ್ಬರು ಮಕ್ಕಳ ಅಪಹರಿಸಿ ಎಸ್ಕೇಪ್
ಅಥಣಿ : ಪಟ್ಟಣದ ವಿಕ್ರಂಪೂರ ಬಡಾವಣೆಯಲ್ಲಿ ಹಾಡು ಹಗಲೇ ಕಾರಿನಲ್ಲಿ ಬಂದ ಇಬ್ಬರೂ ಅಪಹರಣಕಾರರು ಅಜ್ಜಿಯೊಂದಿಗೆ ಮನೆಯಲ್ಲಿದ್ದ ಇಬ್ಬರು ಮಕ್ಕಳನ್ನು ಅಪಹರಿಸಿಕೊಂಡು ಪರಾರಿಯಾಗಿರುವ ಘಟನೆ ಗುರುವಾರ ಮದ್ಯಾಹ್ನ ಎರಡು ಗಂಟೆ ಸುಮಾರಿಗೆ ಜರುಗಿದ್ದು, ಈ ಘಟನೆಯಿಂದ ಅಥಣಿ ಪಟ್ಟಣದ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ.
ಶಾಲೆಯಿಂದ ಮನೆಗೆ ಇಬ್ಬರು ಮಕ್ಕಳು ಅಜ್ಜಿಯ ಜೊತೆಗೆ ಇರುವಾಗಲೇ ನಂಬರ್ ಪ್ಲೇಟ್ ಇಲ್ಲದೇ ಇರುವ ಸ್ವಿಫ್ಟ್ ಕಾರಿನಲ್ಲಿ ಬಂದ ಇಬ್ಬರು ಅಪಹರಣಕಾರರು ಮನೆಗೆ ನುಗ್ಗಿ ಮಕ್ಕಳ ಬಾಯನ್ನು ಮುಚ್ಚಿಕೊಂಡು ಕಾರಿನಲ್ಲಿ ಪರಾರಿಯಾಗಿದ್ದಾರೆ.
ಅಪಹರಣಕ್ಕೆ ಒಳಗಾಗಿರುವ ಮಕ್ಕಳನ್ನು ಕು. ಸ್ವಸ್ತಿ ದೇಸಾಯಿ (4), ವ್ಯಮ ದೇಸಾಯಿ (3) ಎನ್ನ ಲಾಗಿದ್ದು, ಈ ಅಪಹರಣದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಮಕ್ಕಳ ತಂದೆ ತಾಯಿ ಮನೆಯಲ್ಲಿ ಇಲ್ಲದೇ ಇರುವ
ಸಮಯದಲ್ಲಿ ಈ ಘಟನೆ ನಡೆದಿದ್ದು, ಮನೆಯಲ್ಲಿದ್ದ ಅಜ್ಜಿ ಹೇಳಿದ ಮಾಹಿತಿ ಆಧಾರದ ಮೇಲೆ ಮಕ್ಕಳ ಪಾಲಕರಾದ ವಿಜಯ್ ದೇಸಾಯಿ ಮತ್ತು ಶ್ವೇತಾ ದೇಸಾಯಿ ಅವರು ಪತ್ರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಸುದ್ದಿ ತಿಳಿಯುತ್ತಿದ್ದಂತೆ ಅಥಣಿ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಿ ಸಿ ಕ್ಯಾಮೆರಾ ದೃಶ್ಯಾವಳಿಗಳನ್ನ ಪರಿಶೀಲಿಸಿದ್ದಾರೆ. ಮಕ್ಕಳ ಅಪಹರಣ ಮಾಡಿದ ಇಬ್ಬರೂ ಆರೋಪಿಗಳ ಶೋಧಕ್ಕೆ ಪೊಲೀಸರು ಬಲೆಬಿಸಿದ್ದು, ಘಟನೆ ಸಂಭಂದ ಅಥಣಿ
ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದೆ ಯಾರಿಗಾದರೂ ಅಪರಿಚಿತ ವ್ಯಕ್ತಿಗಳು ಮಕ್ಕಳೊಂದಿಗೆ ಕಂಡು ಬಂದಲ್ಲಿ ಅಥಣಿ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಪಿಎಸ್‌ಐ ಗೀರಮಲ್ಲಪ್ಪ ಉಪ್ಪಾರ ಮೋ : 94480804062 ಮನವಿ ಮಾಡಿದ್ದಾರೆ.


