Select Page

Advertisement

ಪ್ರತಿಭಟನೆ ಬಿಟ್ಟು ಕರ್ತವ್ಯಕ್ಕೆ ಹಾಜರಾಗಿ ; ಎಸ್ಮಾ ಭೀತಿಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು

ಪ್ರತಿಭಟನೆ ಬಿಟ್ಟು ಕರ್ತವ್ಯಕ್ಕೆ ಹಾಜರಾಗಿ ; ಎಸ್ಮಾ ಭೀತಿಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು

ಬೆಂಗಳೂರು : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಎಲ್ಲಾ ವೃಂದ ಸಂಘಗಳ ನೇತೃತ್ವದಲ್ಲಿ ಹಲವು ಸಮಸ್ಯೆಗಳನ್ನು ಪರಿಹರಿಸುವಂತೆ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಅಕ್ಟೋಬರ್ 4 ರಿಂದ ರಾಜ್ಯಾದ್ಯಂತ ಗ್ರಾಮ ಪಂಚಾಯಿತಿ ಸೇವೆ ನಿಲ್ಲಿಸಿ ಅನಿರ್ದಿಷ್ಟಾವಧಿ ಹೋರಾಟ ನಡೆಯುತ್ತಿದೆ.

ಕೂಡಲೇ ಪ್ರತಿಭಟನೆ ಕೈಬಿಟ್ಟು ಕೆಲಸಕ್ಕೆ ಮರಳುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸರ್ಕಾರ ತಾಕೀತು ಮಾಡಿದ್ದು ಒಂದಿವೇಳೆ ಆದೇಶ ಪಾಲಿಸದಿದ್ದರೆ ಎಸ್ಮಾ ಜಾರಿಗೆ ತರುವ ಎಚ್ಚರಿಕೆಯನ್ನು ಸರ್ಕಾರ ನೀಡಿದೆ‌‌. ಸಧ್ಯ ಇ ಎಚ್ಚರಿಕೆಗೆ ಪ್ರತಿಭಟನಾಕಾರರು ಬಗ್ಗುತ್ತಾರಾ ಎಂಬುದನ್ನು ಕಾದು ನೋಡಬೇಕು.

ಏನಿದೆ ಪತ್ರದಲ್ಲಿ…? ಸದರಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನೌಕರರ ವೃಂದದ ಸಂಘಗಳ ಬೇಡಿಕೆಗಳ ಕುರಿತು ಚರ್ಚಿಸಲು ದಿನಾಂಕ 30.09.2024 ಬೆಳಿಗ್ಗೆ 11.00 ಗಂಟೆಗೆ ಸರಕಾರದ ಅಪಾರ ಮುಖ್ಯ ಕಾರ್ಯದರ್ಶಿ ಪಂಚಾಯತ್ ರಾಜ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರವರ ಅಧ್ಯಕ್ಷತೆಯಲ್ಲಿ ಸಭೆಯನ್ನು ಕರೆಯಲಾಗಿತ್ತು ಆದರೆ ಸದರಿ ಸಭೆಗೆ ಸಂಘದಿಂದ ಯಾರೂ ಕೂಡ ಹಾಜರಾಗಿರುವುದಿಲ್ಲ,

ಮಾನ್ಯ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವರ ಆದೇಶದಂತೆ ದಿನಾಂಕ 30.09.2024 ಮಧ್ಯಾಹ್ನ 3.00 ಗಂಟೆಗೆ ಮಾನ್ಯ ಗ್ರಾಮೀಣಾಭಿವೃದ್ಧಿ ಹಾಗು ಪಂಚಾಯತ್ ರಾಜ್ ಸಚಿವರ ಅಧ್ಯಕ್ಷತೆಯಲ್ಲಿ ಸಭೆಯನ್ನು ಕರೆಯಲಾಗಿತ್ತು. ಮಾನ್ಯ ಸಚಿವರು ತಮ್ಮ ಕಾರ್ಯಕಲಾಪಗಳನ್ನೆಲ್ಲ ಬದಿಗೊತ್ತಿ ಸದರಿ ಸಭೆಗೆ ಹಾಜರಾಗಿ ಸಂಘದ ಪ್ರತಿನಿಧಿಗಳಿಗಾಗಿ ಕಾದಿದ್ದರೂ ಸಹ ಸದರಿ ಸಭೆಗೂ ಸಂಘಗಳಿಂದ ಯಾರು ಹಾಜರಾಗಿರುವುದಿಲ್ಲ.

ದಿನಾಂಕ 30.09.2024 ರಂದು ಕರೆದ 02 ಸಭೆಗಳಿಗೆ ನೌಕರರ ವೃಂದದ ಸಂಘಗಳಿಂದ ಯಾರು ಹಾಜರಾಗದ ಕಾರಣ ತಮ್ಮ ಬೇಡಿಕೆಗಳ ಬಗ್ಗೆ, ಚರ್ಚಿಸಲು ಮತ್ತೊಮ್ಮೆ ಸಭೆ ದಿನಾಂಕ ವಿಗಧಿಪಡಿಸಲು ಮಾನ್ಯ ಸಚಿವರು ನಿರ್ದೇಶನ ನೀಡಿದಂತೆ ದಿನಾಂಕ 01.10.2024 ಮಧ್ಯಾಹ್ನ 3.30 ಗಂಟೆಗೆ ಮಾನ್ಯ ಸರ್ಕಾರದ ಅಪರ ಮುಖ್ಯಕಾರ್ಯದರ್ಶಿಗಳು(ಪಂ.ರಾಜ್,

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರವರ ಅಧ್ಯಕ್ಷತೆಯಲ್ಲಿ ಮತ್ತೊಮ್ಮೆ ಸಭೆಯನ್ನು ಕರೆಯಲಾಗಿತ್ತು. ಈ ಸಭೆಗೂ ಸಹ ಸಂಘಗಳಿಂದ ಯಾರೂ ಹಾಜರಾಗಿರುವುದಿಲ್ಲ. ಆದಾಗ್ಯೂ ಮಾನ್ಯ ಇಲಾಖಾ ಸಚಿವರು, ಸಂಘದವರ ಬೇಡಿಕೆಗಳ ಕುರಿತು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಇಲಾಖಾ ಅಧಿಕಾರಿಗಳೊಂದಿಗೆ ಸಕಾರಾತ್ಮಕವಾಗಿ ಚರ್ಚಿಸಿರುತ್ತಾರೆ.

ದಿನಾಂಕ: 04.10.2024 ರಂದು ಫ್ರೀಡಂ ಪಾರ್ಕ್ ಮೈದಾನ, ಬೆಂಗಳೂರು ಇಲ್ಲಿನ ಪ್ರತಿಭಟನಾ ಸ್ಥಳಕ್ಕೆ ಮಾನ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು(ಪಂ.ರಾಜ್) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಆಯುಕ್ತರು, ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ. ರವರು ಖುದ್ದು ಆಗಮಿಸಿ ಪ್ರತಿಭಟನಾ ನಿರತರ ಬೇಡಿಕೆಗಳನ್ನು ಸ್ವೀಕರಿಸಿ ಬೇಡಿಕೆಗಳ ಕುರಿತು ಅವರ ಜೊತೆ ಚರ್ಚಿಸಿರುತ್ತಾರೆ.

ಅದೇ ದಿನ ಸಂಜೆ 5.30 ಗಂಟೆಗೆ, ಮಾನ್ಯ ಸರ್ಕಾರದ ಅವರ ಮುಖ್ಯ ಕಾರ್ಯದರ್ಶಿಗಳು(ಪಂ.ರಾಜ್) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರವರ ಅಧ್ಯಕ್ಷತೆಯಲ್ಲಿ ಮತ್ತೊಮ್ಮೆ ಸಭೆಯನ್ನು ಕರೆದು ಸದಸ್ಯರ ಒಕ್ಕೂಟ ಮತ್ತು ನೌಕರರ ವೃಂದದ ಸಂಘಗಳ ರಾಜ್ಯಾಧ್ಯಕ್ಷರು ಮತ್ತು ಪ್ರತಿನಿಧಿಗಳೊಂದಿಗೆ ಅವರ ಬೇಡಿಕೆಗಳ ಕುರಿತು ಸ ವಿಸ್ತಾರವಾಗಿ ಚರ್ಚಿಸಿ ಸದರಿಯವರ ಬೇಡಿಕೆಗಳ ಕ್ರಮದ ಕುರಿತು ನಡವಳಿಯನ್ನು ಸಹ ನೀಡಲಾಗಿರುತ್ತದೆ.

ಮಾನ್ಯ ಸಚಿವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರವರ ಆದೇಶದಂತೆ ಸಂಘಗಳ ಬೇಡಿಕೆ ಕುರಿತು ಚರ್ಚಿಸಲು ದಿನಾಂಕ:10.10.2024 ರಂದು
ಅಪರಾಹ್ನ 3.00 ಗಂಟೆಗೆ ಮಾನ್ಯ ಸಚಿವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ರವರ ಅಧ್ಯಕ್ಷತೆಯಲ್ಲಿ ಸಭೆಯನ್ನು ಕರೆಯಲಾಗಿರುತ್ತದೆ. ಆದರೂ ಸಹ ಗ್ರಾಮ ಪಂಚಾಯತಿ ನೌಕರರು ಹಾಗೂ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗದೇ ಇರುವುದು ಕಂಡು ಬಂದಿರುತ್ತದೆ.

ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮಗಳು, 2021 ನಿಯಮ 9 ರಂತೆ ಯಾವುದೇ ಸರ್ಕಾರಿ ನೌಕರನು ಸಾರ್ವಜನಿಕ ಸುವ್ಯವಸ್ಥೆಗೆ ಒಳಗೊಂಡಿರುವ ಯಾವುದೇ ಪ್ರದರ್ಶನದಲ್ಲಿ ಭಾಗವಹಿಸತಕ್ಕದಲ್ಲ ಹಾಗೂ ಎಷ್ಟೇ ಸಂಖ್ಯೆಯ ಸರ್ಕಾರಿ ನೌಕರರೊಡನೆ ಸೇರಿ ಯಾವುದೇ ಬಗೆಯ ಮುಷ್ಕರಕ್ಕೆ ತೊಡಗತಕ್ಕದ್ದಲ್ಲ.

ಸರ್ಕಾರದ ಹಂತದಲ್ಲಿ ಈಗಾಗಲೇ ಅವರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿರುವುದರಿಂದ ಕೂಡಲೇ ಸಾರ್ವಜನಿಕ ಸೇವೆಗಳಿಗೆ ವ್ಯತ್ಯಯವಾಗದಂತೆ ಕೆಲಸ ನಿರ್ವಹಿಸಲು ನಿರ್ದೇಶನ ನೀಡುವುದು ಹಾಗೂ ಕರ್ತವ್ಯಕ್ಕೆ ಹಾಜರಾಗಲು ವಿಫಲರಾದಲ್ಲಿ ಕರ್ನಾಟಕ ನಾಗರೀಕ ಸೇವಾ ನಿಯಮಗಳಂತೆ ಕ್ರಮವಹಿಸುವಂತೆ ಉಲ್ಲೇಖಿಸಿ ಕರ್ನಾಟಕ

ಸರ್ಕಾರ ಪಂಚಾಯತ್ ರಾಜ್ ಆಯುಕ್ತರು ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯವರಿಗೆ ಸರಕಾರದ ಆದೇಶ ಸಂಖ್ಯೆ ಕೆ ಪಿ ಆರ್ ಸಿ ಜಿ ಪಿ ಎ 487 /2024 ರಂತೆ ದಿನಾಂಕ 08 /10/ 2024 ರಂದು ಕಟ್ಟುನಿಟ್ಟಿನ ಆದೇಶ ಜಾರಿ ಮಾಡಿದೆ.

ಇದರಿಂದ ಪಂಚಾಯತ್ ರಾಜ್ ಕುಟುಂಬದ ಹೋರಾಟಕ್ಕೆ ಭಾರಿ ಹಿನ್ನಡೆಯಾಗಿದೆ, ಹಾಗೂ ಈ ಹೋರಾಟಕ್ಕೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳದ್ದೇ ಸರಿಯಾದ ಸ್ಪಂದನೆ ಇಲ್ಲದ ಕಾರಣ, ಹಾಗೂ ಅಧಿಕಾರಿಗಳು ಹಾಗೂ ನೌಕರರು ಭಾರಿ ಪ್ರಮಾಣದಲ್ಲಿ ಹಾಜರಾತಿಯನ್ನು ಹಾಕಿರುವುದು ಇಲಾಖೆಗೆ ಕಂಡುಬಂದಿರುತ್ತದೆ.

ಹೋರಾಟಕ್ಕೆ ಮೊದಲೇ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳು ಸರಕಾರದ ಮಟ್ಟದಲ್ಲಿ ಕರೆದ ಸಭೆಗೆ ಹಾಜರಾಗದೆ ದುರ್ನಾಡತೆ ತೋರಿರುವುದು ಈ ಎಲ್ಲಾ ಬೆಳವಣಿಗೆಗೆ ಕಾರಣವಾಗಿದೆ. ಹಾಗಾಗಿ ನೌಕರರ ಹೋರಾಟದ ಮುಂದಿನ ನಡೆಯನ್ನು ಕಾದುನೋಡಬೇಕಾಗಿದೆ.

ಸರಕಾರದ ಆದೇಶದಂತೆ ಕೆಲಸಕ್ಕೆ ಹಾಜರಾಗದೆ ಇದ್ದಲ್ಲಿ ಎಸ್ಮಾ ಜಾರಿಯಾಗುವ ಸಾಧ್ಯತೆ ಇದೆ.

ಎಸ್ಮಾ ಎಂದರೇನು ? : ಜಾರಿಯಾದರೆ ಪರಿಣಾಮ ಏನಾಗುತ್ತೆ ? ಬೆಂಗಳೂರು, ಜೂನ್, 26: ಸಾರಿಗೆ ನೌಕರರ ಮುಷ್ಕರ ತಡೆಯಲು ರಾಜ್ಯ ಸರ್ಕಾರ ಎಸ್ಮಾ ಜಾರಿಗೆ ಮುಂದಾಗಿದೆ. ಸಾರಿಗೆ ನೌಕರಿರಬಹುದು, ಪೊಲೀಸರಿರಬಹುದು, ಉಪನ್ಯಾಸಕರಿರಬಹುದು ಅಥವಾ ಇತರೆ ಯಾವುದೇ ಸರ್ಕಾರಿ ನೌಕರರಿರಬಹುದು.

ಪ್ರತಿಭಟನೆಗೆ ಮುಂದಾದಾಗ ಎಸ್ಮಾ ಜಾರಿ ಮಾಡುತ್ತೇನೆ ಎಂದು ಸರ್ಕಾರ ಹೇಳುತ್ತದೆ. ಇದರ ಹೇರಿಕೆಗೆ ಸರ್ಕಾರ ಮುಂದಾದರೆ ಉದ್ಯೋಗಿಗಳು ಪರಿಣಾಮ ಎದುರಿಸಬೇಕಾಗುತ್ತದೆ ಎಸ್ಮಾ ಎಂದರೆ ಅಗತ್ಯ ಸೇವೆ ನಿರ್ವಹಣೆ ಕಾಯಿದೆ ಎಂದು ಕರೆಯಬಹುದು. ಸರ್ಕಾರಿ ನೌಕರರ ಮೇಲೆ ಅಂಕುಶಹಾಕುವ ಕಾಯಿದೆ 1968 ರಿಂದ ಜಾರಿಯಲ್ಲಿದೆ. ಕರ್ನಾಟಕದಲ್ಲಿ 1994ರಲ್ಲಿ ಈ ಕಾನೂನಿನ ಮೊದಲ ಉಲ್ಲೇಖ ಆಯಿತು.

ಜೂನ್ 2013 ರಿಂದ ರಾಜ್ಯದಲ್ಲಿ ಕಾನೂನು ಬಳಕೆಗೆ ಅವಕಾಶ ಸಿಕ್ಕಿತು. ಸರ್ಕಾರಿ ನೌಕರರು ಪ್ರತಿಭಟನೆಗೆ ಮುಂದಾಗಿದ ಪರಿಸ್ಥಿತಿ ಸಂದರ್ಭದಲ್ಲಿ ಸರ್ಕಾರ ಎಸ್ಮಾ ಜಾರಿ ಮಾಡಲು ಮುಂದಾಗುತ್ತದೆ. ಮೂಲ ಸೌಕರ್ಯಗಳಾದ ಆಹಾರ, ಭದ್ರತೆ, ಶಿಕ್ಷಣ, ಆರೋಗ್ಯ, ಪೊಲೀಸ್ ವ್ಯವಸ್ಥೆಗೆ ಭಂಗ ಬರುವ ಸಂಭವ ಹೆಚ್ಚಿದೆ ಎಂದಾಗ ಸರ್ಕಾರ ಎಸ್ಮಾ ಜಾರಿಗೆ ಮುಂದಾಗುತ್ತದೆ.

ಎಸ್ಮಾ ಜಾರಿ ಪರಿಣಾಮ ,ಎಂದರೆ ಕಡ್ಡಾಯ ಕೆಲಸ ಎಂಬ ಅರ್ಥ ಬರುತ್ತದೆ. ಸಂವಿಧಾನ ಅನುಸೂಚಿ 7ರಲ್ಲಿನ 2ನೇ ಪಟ್ಟಿಯಲ್ಲಿರುವ ‘ಸಾರ್ವಜನಿಕ ಸುವ್ಯವಸ್ಥೆ’ ಸಂಬಂಧಿಸಿದ ಎಲ್ಲಾ ಸೇವೆಗಳ ಕುರಿತು ರಾಜ್ಯ ಶಾಸಕಾಂಗವು ಕಾನೂನು ರೂಪಿಸುವ ಅಧಿಕಾರ ಹೊಂದಿರುತ್ತದೆ.

ಎಸ್ಮಾ ಕಾಯ್ದೆ ಉಲ್ಲಂಘನೆ ಮಾಡಿದರೆ ವಾರಂಟ್ ಇಲ್ಲದೇ ಬಂಧನ ಮಾಡಬಹುದು. ಅಲ್ಲದೆ ಆರು ತಿಂಗಳು ಜೈಲು ವಾಸ ಸಾಧ್ಯತೆಯೂ ಇರುತ್ತದೆ. ಎಸ್ಮಾ ಜಾರಿಯಾದ ಮೇಲೂ ಉದ್ಯೋಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡರೆ ಆತನ ವೇತನ, ಭತ್ಯೆ, ಬಡ್ತಿ ಮತ್ತು ಇತರ ಸವಲತ್ತುಗಳ ಮೇಲೆ ಪರಿಣಾಮ ಉಂಟಾಗುತ್ತದೆ.

ಸರ್ಕಾರ ಎಸ್ಮಾ ಜಾರಿ ಮಾಡಿದೆ ಒಂದು ರೀತಿಯಲ್ಲಿ ಕಟ್ಟಪ್ಪಣೆ ಮಾಡಿದೆ ಎಂದೇ ಅರ್ಥ. ಈ ಬಗ್ಗೆ ಅಧಿಕಾರಿ ನೌಕರರು ಎದುರು ನೋಡಬೇಕಾದಿತು. ಈ ಆದೇಶದಿಂದ ರಾಜ್ಯದ ಎಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಕ್ರಮ ಕೈಗೊಳ್ಳುವ ಸಾಧ್ಯತೆ ಹೆಚ್ಚಿದೆ.

Advertisement

Leave a reply

Your email address will not be published. Required fields are marked *

error: Content is protected !!