ಬೆಳಗಾವಿ – ಅತ್ಯಾಚಾರ ಪ್ರಕರಣದ ಆರೋಪಿಗೆ 20 ವರ್ಷ ಜೈಲು
ಬೆಳಗಾವಿ : ಯುವತಿಯನ್ನು ಕರೆದೊಯ್ದು ಅತ್ಯಾಚಾರ ಎಸಗಿದ್ದ ಕಾಮುಕನಿಗೆ ಬೆಳಗಾವಿಯ 3 ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಅಪರಾಧಿಗೆ 20 ವರ್ಷ ಜೈಲುಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿದೆ.
ನಿಪ್ಪಾಣಿ ತಾಲೂಕಿನ ಕುರ್ಲಿ ಗ್ರಾಮದ ಶ್ರೀಸಂಗಮ ನಿಕಾಡೆ ಎಂಬಾತ 2016 ರ ಜುಲೈ 23 ರಂದು ಅಪ್ರಾಪ್ತ ಯುವತಿಯನ್ನು ಪುಸಲಾಯಿಸಿ ಕರೆದೊಯ್ದಿದ್ದ. ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕರವೀರ ತಾಲೂಕಿನ ಆಡುರ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿತ್ತು.
ಈ ಕುರಿತು ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದರು. ಈ ಪ್ರಕರಣದ ಕುರಿತು ತನಿಖೆ ನಡೆಸಿದ್ದ ಬೆಳಗಾವಿಯ 3 ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಶುಕ್ರವಾರ ಮಹತ್ವದ ಆದೇಶ ಹೊರಡಿಸಿದೆ.
3 ನೇ ಹೆಚ್ಚುವರಿ ನ್ಯಾಯಾಧೀಶರಾದ ಶ್ರೀಮತಿ ಸಿ,ಎಮ್ ಪುಷ್ಪಲತಾ ಅವರಿದ್ದ ನ್ಯಾಯಪೀಠ ಅಪರಾಧಿ ಶ್ರೀಸಂಗಮ ನಿಕಾಡೆಗೆ 20 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡವಿಧಿಸಿದೆ. ಇನ್ನೂ ನೊಂದ ಬಾಲಕಿಗೆ 1 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಎಲ್.ವಿ ಪಾಟೀಲ ವಾದ ಮಂಡಿಸಿದರು. ಮತು ಈ ಪ್ರಕರಣದ ತನಿಖೆಯನ್ನು ಸಿಪಿಐ ಕಿಶೋರ ಭರಣಿ, ನಿಪ್ಪಾಣಿ ಠಾಣೆ ಪಿಎಸ್ಐ. ಎಮ್.ಬಿ. ಬಿರಾದಾರ ಪಿ.ಎಸ್.ಐ ನಿಪ್ಪಾಣಿ ಗ್ರಾಮೀಣ ಡಿ.ಬಿ ಕೋತ್ವಾಲ್ ಹಾಗೂ ಎ.ಎಸ್.ಐ ಕೆ.ಡಿ ಹಿರೇಮಠ ಪ್ರಕರಣದ ತನಿಖೆಯನ್ನು ಕೈಕೊಂಡಿದ್ದರು.
ಪ್ರಕರಣದಲ್ಲಿ ತನಿಖೆ ಕೈಗೊಂಡ ಎಲ್ಲಾ ಸಿಬ್ಬಂದಿಗಳಿಗೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೆದ್ ಅಭಿನಂದನೆ ಸಲ್ಲಿಸಿದ್ದಾರೆ.


