ಮಾಧ್ಯಮ ಸಮನ್ವಯ ಸಮಿತಿ ಸಭೆ ಮುಂದೂಡಿಕೆ
ಚನ್ನಮ್ಮನ ಕಿತ್ತೂರು : ಅ. 23 ರಿಂದ 3 ದಿನಗಳ ಕಾಲ ಚನ್ನಮ್ಮನ ಕಿತ್ತೂರಿನಲ್ಲಿ ನಡೆಯುತ್ತಿರುವ ಐತಿಹಾಸಿಕ ಚನ್ನಮ್ಮನ ಕಿತ್ತೂರು ಉತ್ಸವದ ಹಿನ್ನಲೆ ಮಾಧ್ಯಮ ಸಮನ್ವಯ ಸಮಿತಿ ಸಭೆಯ ಶನಿವಾರ ಬೆಳಿಗ್ಗೆ 10 ಗಂಟೆಗೆ ಆಯೋಜನೆ ಮಾಡಲಾಗಿತ್ತು.
ಸ್ಥಳೀಯ ಹಾಗೂ ಬೆಳಗಾವಿಯ ಮಾಧ್ಯಮ ಪ್ರತಿನಿಧಿಗಳನ್ನು ಕಡೆಗಣಿಸಿ ಬೇರೆ ಬೇರೆ ವ್ಯಕ್ತಿಗಳನ್ನ ಸಮಿತಿಯಲ್ಲಿ ಸೇರಿಸಿದ ಹಿನ್ನಲೆ ಕಿತ್ತೂರಿನ ಪತ್ರಕರ್ತರ ಜೊತೆ ಸಭೆ ನಡೆಸಿದ ಕಿತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಈರಣ್ಣ ಬಣಜಿಗಿ ನೇತೃತ್ವದಲ್ಲಿ ಮಾಧ್ಯಮ ಸಮನ್ವಯ ಸಮಿತಿ ಸಭೆಯನ್ನು ಬಹಿಷ್ಕಾರ ಮಾಡುವಂತೆ ಪ್ರಕಟಣೆ ನೀಡಿದ್ದರು.
ಈ ಸುದ್ದಿಯನ್ನು ಬೆಳಗಾವಿ ವಾಯ್ಸ್ ಪ್ರಕಟಗೊಳಿಸಿದ್ದು ಕೆಲವೇ ಗಂಟೆಗಳಲ್ಲಿ ಬೆಳಗಾವಿಯ ವಾರ್ತಾ ಇಲಾಖೆಯ ಉಪ ನಿರ್ದೇಶಕರು ಸಭೆಯನ್ನು ಮುಂದೂಡಿದ್ದಾರೆ.


