Select Page

Advertisement

ಪ್ರೀತಿಗೆ ನಿರಾಕರಿಸಿದ್ದಕ್ಕೆ ಯುವತಿ ತಾಯಿಗೆ ಚಾಕು ಇರಿದ ಯುವಕ

ಪ್ರೀತಿಗೆ ನಿರಾಕರಿಸಿದ್ದಕ್ಕೆ ಯುವತಿ ತಾಯಿಗೆ ಚಾಕು ಇರಿದ ಯುವಕ

ಹುಬ್ಬಳ್ಳಿ : ಪ್ರೀತ್ಸೆ, ಪ್ರೀತ್ಸೆ ಅಂತ ಹುಡುಗಿಯ ಹಿಂದ ಬಿದ್ದ ಪಾಗಲ್ ಪ್ರೇಮಿ ತಾನು ಪ್ರೀತಿಸುತ್ತಿರುವ ಹುಡುಗಿಯ ತಾಯಿಗೆ ಚಾಕು ಇರಿದ ಘಟನೆ ನಗರದ ಲೋಹಿಯಾ ನಗರದಲ್ಲಿ ನಡೆದಿದೆ.

ಮಹೇಶ್ (24) ಎಂಬಾತನೇ ನೀಲಾ ಹಂಪಣ್ಣವರ್ ಎಂಬ ಮಹಿಳೆಗೆ ಹೊಟ್ಟೆ ಭಾಗಕ್ಕೆ ಚಾಕು ಇರಿದಿದ್ದಾನೆ. ಚಾಕು ಇರಿದು ಪರಾರಿಯಾಗಿದ್ದ ಮಹೇಶ್ ನನ್ನು ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಯಗೊಂಡಿರುವ ನೀಲಾ ಮಗಳಿಗೆ ಆರೋಪಿ ಮಹೇಶ್ ಮದುವೆಯಾಗು, ಲವ್ ಮಾಡು ಎಂದು ಐದು ವರ್ಷದಿಂದ ಬಲವಂತ ಮಾಡುತ್ತಿದ್ದ, ಬುಧವಾರ ಏಕಾಏಕಿ ಬಂದು, ನೀಲಾ ಎಂಬ ಮಹಿಳೆಗೆ ಚಾಕು ಇರಿದು ಪರಾರಿಯಾಗಿದ್ದ. ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಹು-ಧಾ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ತಿಳಿಸಿದರು.

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ನಂತರ ಮಾತನಾಡಿದ ಪೊಲೀಸ್ ಕಮೀಶನರ್, ಹುಬ್ಬಳ್ಳಿಯ ಲೋಹಿಯಾ ಕಾಲೋನಿಯಲ್ಲಿ ಮಹೇಶ್ ಎಂಬಾತ ಏಕಾಏಕಿ ಬಂದು ನಿಮ್ಮನೆಲ್ಲಾ ಕೊಲೆ ಮಾಡುತ್ತೇನೆಂದು ಭಯಪಡಿಸಿ ನೀಲಾ ಎಂಬ ಮಹಿಳೆಗೆ ಚಾಕು ಇರಿದಿದ್ದಾನೆ.

ಅಲ್ಲದೇ ಅಲ್ಲಿದ್ದವರಿಗೆ ಹಲ್ಲೆ ಮಾಡಲು ಮುಂದಾಗಿದ್ದಾಗ, ಅವನನ್ನು ಹೊರ ಹಾಕಿದ ಬಳಿ ಅಲ್ಲಿಂದ ಓಡಿ ಹೋಗಿದ್ದಾನೆ. ಸ್ಥಳೀಯರು ಗಂಭೀರವಾಗಿ ಗಾಯಗೊಂಡಿದ್ದ ನೀಲಾ ಎಂಬ ಮಹಿಳೆಯನ್ನು ಚಿಕಿತ್ಸೆಗೆ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದರು.

Advertisement

Leave a reply

Your email address will not be published. Required fields are marked *

error: Content is protected !!