Select Page

Advertisement

ಹೃದಯಾಘಾತದಿಂದ 6 ನೇ ತರಗತಿ ವಿದ್ಯಾರ್ಥಿ ಸಾವು

ಹೃದಯಾಘಾತದಿಂದ 6 ನೇ ತರಗತಿ ವಿದ್ಯಾರ್ಥಿ ಸಾವು

ಹಾಸನ : ಆರನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಯುವಕ ಹೃದಯಾಘಾತದಿಂದ ಮೃತಪಟ್ಟ ಘಟನೆ ಹಾಸನ ಜಿಲ್ಲೆ ಆಲೂರು ತಾಲೂಕಿನ ಚನ್ನಾಪುರ ಗ್ರಾಮದಲ್ಲಿ ನಡೆದಿದೆ.

ಚನ್ನಾಪುರ ಗ್ರಾಮದ ಸಚೀನ್ (11) ಮೃತಪಟ್ಟ ಬಾಲಕ.‌ ಆಲೂರು ಹೊಬಳಿಯ ಸರ್ಕಾರಿ ಶಾಲೆಯಲ್ಲಿ 6 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ.‌ ಎದೆನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಶಾಲೆಗೆ ಹೋಗದೆ ಮನೆಯಲ್ಲಿದ್ದ.‌

ಮಗ ಮನೆಯಲ್ಲಿ ಇದ್ದಾನೆ ಎಂದು ತಾಯಿ ತನ್ನ ಕೆಲಸ ಮುಂದುವರಿಸಿದ್ದಾಳೆ. ಟಿವಿ ನೋಡುತ್ತಿದ್ದಾಗಲೇ ಮಗ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.‌ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯುವ ಮುನ್ನವೇ ವಿದ್ಯಾರ್ಥಿ ಮೃತಪಟ್ಟಿದ್ದ.

Advertisement

Leave a reply

Your email address will not be published. Required fields are marked *

error: Content is protected !!