Select Page

Advertisement

ಹಣ ಕೊಡದಿದ್ದರೆ ಶೆಡ್ಡಿಗೆ ಬಾ ಅಂತಾರೆ ; ಹೈಕೋರ್ಟ್ ಜಡ್ಜ್ ಮಾತು ವೈರಲ್

ಹಣ ಕೊಡದಿದ್ದರೆ ಶೆಡ್ಡಿಗೆ ಬಾ ಅಂತಾರೆ ; ಹೈಕೋರ್ಟ್ ಜಡ್ಜ್ ಮಾತು ವೈರಲ್

ಬೆಂಗಳೂರು : ಸಾಮಾನ್ಯವಾಗಿ ಕೋರ್ಟ್ ನಲ್ಲಿ ನ್ಯಾಯ ನೀಡುವ ನ್ಯಾಯಾಧೀಶರು ಆಡುವ ಪ್ರತಿಯೊಂದು ಮಾತುಗಳನ್ನು ಜನ ಗಂಭೀರವಾಗಿ ಪರಿಗಣಿಸುತ್ತಾರೆ. ಅಷ್ಟೇ ಅಲ್ಲದೆ ಅವುಗಳನ್ನು ಸ್ವೀಕಾರ ಮಾಡುತ್ತಾರೆ. ಆದರೆ ಸಧ್ಯ ಹೈಕೋರ್ಟ್ ಜಡ್ಜ್ ಒಬ್ಬರು ಆಡಿರುವ ಮಾತು ಎಲ್ಲೆಡೆ ವೈರಲ್ ಅಗುತ್ತಿದೆ. ನಮ್ಮ ಸುತ್ತಲಿನ ವಿಚಾರಗಳನ್ನು ನ್ಯಾಯಮೂರ್ತಿಗಳು ಎಷ್ಟು ಗಂಭೀರವಾಗಿ ಪರಿಗಣಿಸುತ್ತಾರೆ ಎಂಬುದಕ್ಕೆ ಇದೊಂದು ಸಾಕ್ಷಿ.

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಹಾಗೂ ಆತನ ಆಪ್ತೆ ಪವಿತ್ರ ಗೌಡ ಸೇರಿದಂತೆ ಗ್ಯಾಂಗ್ ಸಧ್ಯ ರಾಜ್ಯದ ವಿವಿಧ ಜೈಲುಗಳಲ್ಲಿ ಬಂಧಿಯಾಗಿದ್ದಾರೆ. ಕೆಲ ದಿನಗಳ ಹಿಂದೆ ಪವಿತ್ರ ಗೌಡ ಅವರನ್ನು ನೋಡಲು ಬಂದ ಆಕೆಯ ಸಹೋದ ಮೀಡಿಯಾದವರಿಗೆ ಮಾಡ್ಲಿಕ್ಕೆ ಕೆಲಸ ಇಲ್ವ ಅಂದಿದ್ದರು. ನಂತರ ಇದೇ ವಿಷಯವಾಗಿ ಬಾ ಶೆಡ್ಡಿಗೆ ಹೋಗೋಣ ಎಂದು ಡ್ರೆಂಡ್ ಆಗಿತ್ತು.

ಸಧ್ಯ ಒಂದು ವಿಷಯದ ಕುರಿತು ಮಾತನಾಡುವ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಹಣ ಕೊಡದಿದ್ದರೆ ಶೆಡ್ಡಿಗೆ ಹೋಗೋಣ ಬಾ ಅಂತಾರೆ ಎಂದು ಕೋರ್ಟ್ ಕಲಾಪದ ವೇಳೆ ಹೇಳಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ವಕೀಲರು ಸೇರಿದಂತೆ ಕೆಲಹೊತ್ತು ಎಲ್ಲರೂ ನಕ್ಕು ಮುಂದುವರಿದಿದ್ದಾರೆ. ಸಧ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಜನ ನೋಡಿ ನ್ಯಾಯಾಧೀಶರು ಹೇಗೆ ತಮಾಷೆ ಮಾಡ್ತಾರೆ ಎಂದು ಕಾಮೆಂಟ್ ಹಾಕುತ್ತಿದ್ದಾರೆ.

ತಮ್ಮ ವಿಚಾರಣೆಯ ಶೈಲಿಯಿಂದಲೇ ಸಾಕಷ್ಟು ಗಮನ ಸೆಳೆದಿರುವ ಹೈಕೋರ್ಟ್ ನ್ಯಾಯಾಧೀಶರಾದ ವಿ. ಶ್ರೀಷಾನಂದ ಅವರು, ಮೀಟರ್ ಬಡ್ಡಿ ದಂಧೆ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಶೆಡ್ಡಿಗ್ ಬಾ ಎಂದರು. ಅವರು ಮಾತನಾಡಿರುವ ವಿಡಿಯೋ ಸದ್ಯ ವೈರಲ್ ಆಗುತ್ತಿದ್ದು, ಹಲವು ಸಮಸ್ಯೆಗಳ ಬಗ್ಗೆ ಅವರಿಗೆ ಗೊತ್ತಿರುವ ಮಾಹಿತಿ ನೋಡಿ ಜನ ಅಚ್ಚರಿಪಟ್ಟಿದ್ದಾರೆ.

ಸಿಟಿ ಮಾರ್ಕೆಟ್‌ ಪ್ರದೇಶದಲ್ಲಿ ನಡೆಯುವ ಮೀಟರ್ ಬಡ್ಡಿ ದಂಧೆಯ ಬಗ್ಗೆ ನ್ಯಾಯಾಧೀಶ ವಿ. ಶ್ರೀಷಾನಂದ ವಿವರಣೆ ನೀಡಿದರು. ಬೆಳಿಗ್ಗೆ ವೇಳೆ ಸಿಟಿ ಮಾರ್ಕೆಟ್‌ನಲ್ಲಿ ವ್ಯಾಪಾರ ಮಾಡುವವರಿಗೆ, ಬೀದಿ ಬದಿ ವ್ಯಾಪಾರಿಗಳಿಗೆ, ಬೆಳಿಗ್ಗೆ 1000 ರೂಪಾಯಿ ಕೊಡುತ್ತಾರೆ. ವ್ಯಾಪಾರ ಮುಗಿದ ಬಳಿಕ ಸಂಜೆ 1200 ರೂಪಾಯಿ ವಾಪಸ್ ಕೊಡಬೇಕು.

ಆಟೋ ಡ್ರೈವರ್ ಗಳು ಕೂಡ ಬೆಳಿಗ್ಗೆ ಬಂದು ಆಟೋ ಬಾಡಿಗೆಗೆ ತೆಗೆದುಕೊಂಡು ಹೋಗಬೇಕು, ಸಂಜೆಗೆ 250 ರೂಪಾಯಿ ಕೊಡಬೇಕು, ಎಷ್ಟು ಬೇಕಾದರು ಆಟೋ ಓಡಿಸಿ ಸಂಪಾದನೆ ಮಾಡಬಹುದು, ಟ್ರಾಫಿಕ್ ಫೈನ್ ಕಟ್ಟು, ಪೊಲೀಸರ ಜೊತೆ ಹೊಡೆದಾಡಿಕೊ ಅದಕ್ಕೂ ನನಗೂ ಸಂಬಂಧವಿಲ್ಲ, 250 ರೂಪಾಯಿ ಕೊಡದೇ ಇದ್ದರೆ ಶೆಡ್ಡಿಗ್ ಬಾ ಎಂದು ಕರೆಯುತ್ತಾರೆ ಎಂದು ಹೇಳಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!