ಚಿಕ್ಕೋಡಿ : ಜೆಸಿಬಿ ಬಕೆಟ್ ಗೆ ಸಿಲುಕಿ ಬಾಲಕಿ ಸಾವು
ಚಿಕ್ಕೋಡಿ : ಪೈಪಲೈನ್ ಕಾಮಗಾರಿ ಮಾಡುವ ಸಂದರ್ಭದಲ್ಲಿ ಮನೆಯ ಪಕ್ಕದಲ್ಲಿ ಆಟವಾಡುತ್ತಿದ್ದ ಮಗುವಿಗೆ ಜೆಸಿಬಿ ವಾಹನದ ಬಕೆಟ್ ಬಡಿದು 3 ವರ್ಷದ ಮಗು ಸಾವಣಪ್ಪಿರುವ ಘಟನೆ ನಡೆದಿದೆ.
ಕಬ್ಬೂರ ಪಟ್ಟಣದ ಬೆಲ್ಲದ ಬಾಗೇವಾಡಿ ರಸ್ತೆಗೆ ಹೊಂದಿದ್ದ ಹನುಮಾನ ನಗರದ ಭೂಮಿಕಾ ರಮೇಶ ಕುಕನೂರ (3) ಮೃತ ಬಾಲಕಿ. ಗುರುವಾರ ಹನುಮಾನ ನಗರದ ತೋಟದಲ್ಲಿ ಪಟ್ಟಣ ಪಂಚಾಯತಿಯಿಂದ ಜಲಕುಂಭ ಕಾಮಗಾರಿ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಮನೆಯ ಹತ್ತಿರ ಆಟ ಆಡುತ್ತಿದ್ದ 3ವರ್ಷದ ಬಾಲಕಿಗೆ ಜೆಸಿಬಿಯ ಮುಂದಿನ ಬಕಿಟಿಗೆ ಸಿಲುಕಿ ಮೃತಪಟ್ಟಿದ್ದಾಳೆ.
ಪೈಪಲೈನ್ ಹರಿ ತೆಗುವಾಗ ಜೆಸಿಬಿ ಚಾಲಕನ ಅಜಾಗುರ ಕತೆಯಿಂದ ಈ ಘಟನೆ ಸಂಭವಿಸಿದೆ. ಗಂಭಿರ ಗಾಯಗೊಂಡ ಬಾಲಕಿನ್ನು ಕಲ್ಲೂರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗಾಗಿ ತೆಗೆದುಕೊಂಡು ಹೋದರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ಮೃತ ಬಾಲಕಿಯ ಸಂಭಂದಿಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಚಿಕ್ಕೋಡಿ ಪಿಎಸ್‌ಐ ಬಸಗೌಡ ನೆರ್ಲಿ, ಎಎಸ್‌ಐ ಮಾರುತಿ ಉಗಾರೆ ಭೇಟಿ ನೀಡಿದರು.


