ಧಾರವಾಡಕ್ಕೆ ಓದಲು ಹೋದವರ ಹಲ್ಕಾ ಕೆಲಸ ; Instagram ನಲ್ಲಿ ಹಣಕ್ಕೆ ಬ್ಲ್ಯಾಕ್ ಮೇಲ್ ಮಾಡ್ತಿದ್ದ ಬೆಳಗಾವಿ ಗ್ಯಾಂಗ್ ಅರೆಸ್ಟ್
ಧಾರವಾಡ : ತಂದೆ, ತಾಯಿ ಕಷ್ಟ ಪಟ್ಟು ದುಡಿದು ಮಕ್ಕಳಿಗೆ ಸರ್ಕಾರಿ ನೌಕರಿ ಕೊಡಿಸಬೇಕೆಂಬ ಹಂಬಲದಲ್ಲಿ ಮಕ್ಕಳನ್ನು ದೂರದ ಊರುಗಳಿಗೆ ಓದಲು ಕಳಿಸಿದ್ದರೆ, ಇವರು ಕಂಡವರ ಹೆಣ್ಣುಮಕ್ಕಳ ಕುರಿತು ಅಸಹ್ಯ ಕೆಲಸ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾರೆ.
ಹೌದು ಧಾರವಾಡ ನಗರಕ್ಕೆ ಸರ್ಕಾರಿ ಉದ್ಯೋಗ ಪಡೆಯಲು ಸ್ಪರ್ಧಾತ್ಮಕ ಪರೀಕ್ಷೆ ಓದಲು ಹೋಗಿದ್ದ ಐನಾತಿ ಯುವಕರು ಮಾಡಿದ್ದು ಮಾತ್ರ ವಸೂಲಿ ದಂಧೆ. ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿನಿಯರ ಸೋಶಿಯಲ್ ಮೀಡಿಯಾ ಅಕೌಂಟ್ ಗಳಿಂದ ಪೋಟೋ ಕದ್ದು ಅವುಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಟ್ರೋಲ್ ಪೇಜ್ ಮೂಲಕ ಪೋಸ್ಟ್ ಮಾಡುತ್ತಿದ್ದರು.
ಪೋಸ್ಟ್ ಮಾಡಿದ ವೀಡಿಯೋಗಳನ್ನು ಡಿಲಿಟ್ ಮಾಡಲು 15 ಸಾವಿರ ರೂ. ಹಣಕ್ಕೆ ಬೇಡಿಕೆ ಇಡುತ್ತಿದ್ದರೆ. ಹಣ ಹಾಕದಿದ್ದ ಸಂದರ್ಭದಲ್ಲಿ ಮತ್ತಷ್ಟು ಪೋಟೋ ಗಳನ್ನು ಅಶ್ಲೀಲವಾಗಿ ಎಡಿಟ್ ಮಾಡುತ್ತಿದ್ದರು. ಈ ಪ್ರಕರಣದಲ್ಲಿ ಆರೋಪಿಗಳಾದ ಸಚಿನ ಕಡಕ್ ಭಾವಿ, ಅಕ್ಷಯ ಕಾಂಬಳೆ, ಆಕಾಶ ಮೇಟಿ ಮೂವರನ್ನು ಬಂಧಿಸಲಾಗಿದೆ.
ಯುವಕ & ಯುವತಿಯರ ಪೋಟೋ ಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿದ್ದ ಆರೋಪದಲ್ಲಿ ಧಾರವಾಡ ಉಪನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಬೆನ್ನು ಬಿದ್ದ ಪೊಲೀಸರು ಬೆಳಗಾವಿ ಮೂಲದ ಮೂವರು ಯುವಕರನ್ನು ಬಂಧಿಸಿದ್ದಾರೆ.
ಮಕ್ಕಳಿಗೆ ಬಿದ್ದಿ ಹೇಳಬೇಕಿದ್ದ ತಂದೆಯೂ ಈ ಪ್ರಕರಣದಲ್ಲಿ ಭಾಗಿಯಾಗಿದ್ದು ತಿಳಿದುಬಂದಿದೆ. ಈ ಕುರಿತು ಸಚಿನ್ ಖಡಕಭಾವಿ ತಂದೆಯಿಂದ ನೊಂದ ವಿದ್ಯಾರ್ಥಿಗಳಿಗೆ ಜೀವ ಬೆದರಿಕೆ ಹಾಕಲಾಗಿದೆ. ದೂರು ದಾಖಲಿಸದಂತೆ ಜೀವ ಬೆದರಿಕೆ ಹಾಕಿದ ಸಚಿನ್ ತಂದೆ ವಿರುದ್ಧ ಪ್ರಕರಣ ದಾಖಲಾಗಿದೆ.


