Select Page

Advertisement

ಸಂಸದೆ ಕಂಗನಾ ವಿರುದ್ಧ ಹೇಳಿಕೆ ಖಂಡನೀಯ : ಡಾ. ಸೋನಾಲಿ

ಸಂಸದೆ ಕಂಗನಾ ವಿರುದ್ಧ ಹೇಳಿಕೆ ಖಂಡನೀಯ : ಡಾ. ಸೋನಾಲಿ

ಬೆಳಗಾವಿ : ಬಿಜೆಪಿ ಸಂಸದೆ ಕಂಗನಾ ರಣಾವತ್ ಕುರಿತು ಶಿರೋಮಣಿ ಅಕಾಲಿ ದಳದ ನಾಯಕ ಹಾಗೂ ಮಾಜಿ ಸಂಸದ ಸಿಮ್ರಂಜಿತ್ ಸಿಂಗ್ ಮಾನ್ ಆಪೇಕ್ಷಾರ್ಹ ಹೇಳಿಕೆ ನೀಡಿದ್ದು ಖಂಡನೀಯ ಎಂದು ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಕಾರ್ಯದರ್ಶಿ ಡಾ. ಸೋನಾಲಿ ಸರ್ನೋಬತ್ ಆಕ್ರೋಶ ಹೊರಹಾಕಿದ್ದಾರೆ.

ಒಬ್ಬ ಮಹಿಳಾ ಸಂಸದೆ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಮಾಜಿ ಸಂಸದ ಸಿಮ್ರಂಜಿತ್ ಸಿಂಗ್ ಮಾನ್ ಹೇಳಿಕೆ ಸ್ವೀಕಾರ್ಹವಲ್ಲ. ಅತ್ಯಾಚಾರದಂತ ಸೂಕ್ಷ್ಮ ವಿಷಯಗಳ ಕುರಿತು ಮಾತನಾಡುವುವ ಇವರ ಮಾನಸಿಕ ಸ್ಥಿತಿ ನಾಚಿಕೆಗೆಡಿನ ಸಂಗತಿ. ಇವರ ಹೇಳಿಕೆಯನ್ನು ಮಹಿಳಾ ಮೋರ್ಚಾ ಖಂಡಿಸುತ್ತದೆ ಎಂದರು.

ರಾಜಕೀಯ ಭಾಷಣ ಮಿತಿ‌ ಮೀರಿ‌ ಹೋಗಬಾರದು. ಮಹಿಳೆಯರ ಕುರಿತು ಮಾತನಾಡುವಾಗ ಎಚ್ಚರಿಕೆ ಇರಬೇಕು. ಅತ್ಯಾಚಾರ ಇವತ್ತಿನ ಸಮಾಜದಲ್ಲಿ ಒಂದು ಪಿಡುಗು ಆಗಿದೆ. ಹೆಣ್ಣುಮಕ್ಕಳು ಅದರಿಂದ ಸಾಕಷ್ಟು ನೋವು ಅನುಭವಿಸುತ್ತಾರೆ. ಕೂಡಲೇ ಮಾನ್ ಕ್ಷಮೆ ಕೋರಬೇಕು ಎಂದು ಡಾ. ಸೋನಾಲಿ ಸರ್ನೋಬತ್ ಪತ್ರಿಕಾ ಪ್ರಕಟಣೆ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

ಕಂಗನಾ ರಣಾವತ್‌ಗೆ ಅತ್ಯಾಚಾರದ ಬಗ್ಗೆ ಸಾಕಷ್ಟು ಅನುಭವವಿದೆ. ಅದು ಹೇಗೆ ಸಂಭವಿಸುತ್ತದೆ ಎಂದು ಅವರನ್ನು ಕೇಳಬಹುದು. ಅತ್ಯಾಚಾರ ಹೇಗೆ ಸಂಭವಿಸುತ್ತದೆ ಎಂಬುದರ ಕುರಿತು ಕಂಗನಾ ಜನರಿಗೆ ತಿಳುವಳಿಕೆ ನೀಡಬೇಕು ಎಂದು ಶಿರೋಮಣಿ ಅಕಾಲಿ ದಳದನಾಯಕ ಮತ್ತು ಪಂಜಾಬ್ ನ ಮಾಜಿ ಸಂಸದ ಸಿಮ್ರಂಜಿತ್ ಸಿಂಗ್ ಮಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದರು‌.

Advertisement

Leave a reply

Your email address will not be published. Required fields are marked *

error: Content is protected !!