ಕಿತ್ತೂರು : ರಾತ್ರಿ ಹೊತ್ತಲ್ಲಿ ಕಿತ್ತೂರು ಪಟ್ಟಣ ಪಂಚಾಯತಿ ಸದಸ್ಯನನ್ನು ಅಪಹರಣ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಕಿತ್ತೂರು ಪಟ್ಟಣ ಪಂಚಾಯತಿ ಬಿಜೆಪಿ ಸದಸ್ಯ ನಾಗೇಶ ಅಸೂಂಡಿ ಎಂಬಾತ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಚೌಕಿಮಠ ಕ್ರಾಸ್ ಬಳಿ ನಿಂತ ಸಂದರ್ಭದಲ್ಲಿ ಅಪಹರಣ ಮಾಡಲಾಗಿದೆ.
ಸೆಪ್ಟೆಂಬರ್ 3 ರಂದು ಪಟ್ಟಣ ಪಂಚಾಯತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ನಡೆಯಲಿದ್ದು ಒಟ್ಟು 20 ಸದಸ್ಯರ ಪೈಕಿ ಬಿಜೆಪಿ – 10, ಕಾಂಗ್ರೆಸ್ – ಬೆಂಬಲಿತ 10 ಸದಸ್ಯರಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೆದ್. ಬಿಜೆಪಿ ಸದಸ್ಯನ ಅಪಹರಣ ಕುರಿತು ಪ್ರಕರಣ ದಾಖಲಾಗಿದ್ದು, ಪತ್ತೆಗೆ ಮೂರು ತಂಡ ರಚಿಸಲಾಗಿದೆ ಎಂದು ಹೇಳಿದ್ದಾರೆ.
ಅಪಹರಣ ನಡೆದ ರಾಷ್ಟ್ರೀಯ ಹೆದ್ದಾರೆಯ ಸಮೀಪದ ಚೌಕಿಮಠ ಕ್ರಾಸ್ ಸ್ಥಳಕ್ಕೆ ಕಿತ್ತೂರು ಪೊಲೀಸ್ ಠಾಣೆಯ ಪಿಎಸ್ಐ ಪ್ರವೀಣ್ ಗಂಗೋಳ್ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ .



