Select Page

Advertisement

ಶೀಘ್ರದಲ್ಲೇ ಜಿಲ್ಲಾ ಪಂ. ಹಾಗೂ ತಾಲೂಕು ಪಂ. ಚುನಾವಣೆ ; ಬಿಗ್ ಅಪ್ಡೇಟ್….!

ಶೀಘ್ರದಲ್ಲೇ ಜಿಲ್ಲಾ ಪಂ. ಹಾಗೂ ತಾಲೂಕು ಪಂ. ಚುನಾವಣೆ ; ಬಿಗ್ ಅಪ್ಡೇಟ್….!

ಬೆಂಗಳೂರು : ಈಗಾಗಲೇ ರಾಜ್ಯ ವಿಧಾನಸಭಾ ಚುನಾವಣೆ ಮುಕ್ತಾಯವಾಗಿದ್ದು ಸರ್ಕಾರ ರಚನೆ ಕೂಡಾ ಮುಕ್ತಾಯವಾಗಿದೆ. ಇನ್ನೂ ಅನೇಕರು ಬಹು ನಿರೀಕ್ಷೆಯಲ್ಲಿ ಕಾಯುತ್ತಿದ್ದ ಜಿಲ್ಲಾ ಪಂಚಾಯತ ( ZP ) ಹಾಗೂ ತಾಲೂಕು ಪಂಚಾಯತಿ ( TP ) ಚುನಾವಣೆ ನಡೆಯಲಿದ್ದು ಈಗಾಗಲೇ ಕೊನೆಯ ಹಂತದ ಸಿದ್ಧತೆ ನಡೆಯುತ್ತಿದೆ.

ಜಿ.ಪಂ ಹಾಗೂ ತಾ.ಪಂ ಚುನಾವಣೆ ಹಿನ್ನಲೆಯಲ್ಲಿ ಚುನಾವಣಾ ಇಲಾಖೆ ಸಿದ್ಧತೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಿದೆ. ಶುಕ್ರವಾರ ಈ ಸಂಬಂಧ ಚುನಾವಣೆ ಆಯೋಗದಿಂದ ಸುತ್ತೋಲೆ ಹೊರಡಿಸಲಾಗಿದ್ದು, ಮೇ 29 ರಿಂದ ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಕ್ಷೇತ್ರದ ಮತದಾರರನ್ನು ಗುರುತಿಸುವ ಕಾರ್ಯ ಆರಂಭಿಸಲು ತಿಳಿಸಲಾಗಿದೆ.

ಜೂನ್ 4ರ ವರೆಗೆ ಈ ಕಾರ್ಯ ನಡೆಯಲಿದೆ. ಜೂನ್ 5 ರಿಂದ 13ರ ವರೆಗೆ ಮತದಾರರ ಪಟ್ಟಿ ಪರಿಶೀಲನೆ ಕಾರ್ಯ ನಡೆಯಲಿದ್ದು, ಜೂನ್ 14 ರಿಂದ ಕರಡು ಮತದಾರರ ಪಟ್ಟಿ ಪ್ರಕಟ ಸಲಾಗುವುದು. ಜೂನ್ 19 ರಂದು ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನವಾಗಿದೆ. ಜೂನ್ 22 ರಂದು ಆಕ್ಷೇಪಣೆ ಸಲ್ಲಿಸಲು ಅಂತಿಮ ದಿನವಾಗಿದೆ. ಮತ್ತೊಮ್ಮೆ ಪರಿಶೀಲನೆ ಕಾರ್ಯ ಜೂನ್ 25ರಂದು ನಡೆಸಲಾಗುವುದು. ಜೂನ್ 27 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ ಎಂದು ಚುನಾವಣೆ ಆಯೋಗ ತಿಳಿಸಿದೆ.

Advertisement

Leave a reply

Your email address will not be published. Required fields are marked *

error: Content is protected !!