Select Page

Advertisement

MADDUR : ಮದ್ದೂರಿನಲ್ಲಿ ಪ್ರಚೋದನಕಾರಿ ಭಾಷಣ ಆರೋಪ – ಯತ್ನಾಳ್ ವಿರುದ್ಧ ದೂರು ದಾಖಲು.!

MADDUR : ಮದ್ದೂರಿನಲ್ಲಿ ಪ್ರಚೋದನಕಾರಿ ಭಾಷಣ ಆರೋಪ – ಯತ್ನಾಳ್ ವಿರುದ್ಧ ದೂರು ದಾಖಲು.!
Advertisement

ಮಂಡ್ಯದ ಮದ್ದೂರಿನಲ್ಲಿ (Maddur) ಗಣೇಶ ವಿಸರ್ಜನೆಯ ಸಮಯದಲ್ಲಿ ಕಲ್ಲು ತೂರಾಟವನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagouda Patil Yatnal) ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಮದ್ದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮದ್ದೂರಿನಲ್ಲಿ ಗಣೇಶ ವಿಸರ್ಜನೆಯ ವೇಳೆ ನಡೆದ ನಡೆದ ಕೆಲ ದುಷ್ಕರ್ಮಿಗಳು ಕಲ್ಲು ತೂರಾಟವನ್ನು ನಡೆಸಿದ್ದರು, ಇದನ್ನು ಖಂಡಿಸಿ ಬಿಜೆಪಿ ನಾಯಕರು ಮದ್ದೂರಿನಲ್ಲಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಮದ್ದೂರಿನಲ್ಲಿ ನಡೆದ ಘಟನೆಗೆ ಸಂಬಂಧಪಟ್ಟಂತೆ ಯತ್ನಾಳ್ ಅವರು, ಕಳೆದ ವರ್ಷ ನಾಗಮಂಗಲದಲ್ಲೂ ಇದೆ ರೀತಿಯಾದ ಘಟನೆಯಾಗಿದ್ದನ್ನು ನಾವು ಸ್ಮರಿಸಬಹುದು. ಹಿಂದೂ ಉತ್ಸವಗಳ ಮೇಲೆ ಕಲ್ಲು ತೂರುವ ಸಮಾಜ ಘಾತುಕ, ವಿಚ್ಛಿದ್ರಕಾರಿ ಮನಸ್ಥಿತಿಯ ವ್ಯಕ್ತಿಗಳ ಮೇಲೆ ಗೂಂಡಾ ಕಾಯ್ದೆಯಡಿ ಬಂಧಿಸಬೇಕು ಹಾಗೂ ಸರ್ಕಾರದಿಂದ ಪಡೆಯುತ್ತಿರುವ ಯಾವುದೇ ಸೌಲಭ್ಯವಿದ್ದರೂ ಸಹ ಅದನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಮೊಟಕುಗೊಳಿಸಬೇಕೆಂದು ಆದೇಶಿಸಿದ್ದರು.

ಹಿಂದೂಗಳ ಒಗ್ಗಟ್ಟಿಗಾಗಿ, ಶ್ರೇಯೋಭಿವೃದ್ಧಿಗಾಗಿ, ಧರ್ಮರಕ್ಷಣೆಗೆ ನಾನು ಸದಾ ಬದ್ದ ಹಾಗೂ ರಾಜ್ಯದ ಯಾವುದೇ ಕಡೆ ಹಿಂದೂಗಳ ಮೇಲೆ ಅನ್ಯಾಯವಾದರೂ ಸಹ ನಾನು ಅವರೊಂದಿಗೆ ಇರುತ್ತೇನೆ. ಹಿಂದೂ ಉತ್ಸವಾಚರಣೆಗಳು ಯಾವುದೇ ಕಾರಣಕ್ಕೂ ನಿಲ್ಲಬಾರದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸಡಗರ, ಸಂಭ್ರಮ ದಿಂದ ಗಣೇಶೋತ್ಸವವನ್ನು ಆಚರಿಸಬೇಕೆಂದು ಈ ಸಂದರ್ಭದಲ್ಲಿ ಯತ್ನಲ್ ತಿಳಿಸಿದ್ದರು.

ಕಲ್ಲು ತೂರಾಟದಲ್ಲಿ ಬಂಧಿತರಾಗಿರುವವರಿಗೆ ಕಾನೂನು ನೆರವು ನೀಡೋದಿಲ್ಲ ಎಂದು ಶಪಥಗೈದಿರುವ ಮದ್ದೂರಿನ ವಕೀಲರಿಗೆ ನನ್ನ ಕೃತಜ್ಞತೆಗಳು. ಅಪರಾಧಿಗಳಿಗೆ, ದುಷ್ಕರ್ಮಿಗಳಿಗೆ, ಕಲ್ಲು ತೂರಾಟ ಮಾಡಿದವರಿಗೆ ಅವರಿಗೆ ಅರ್ಥವಾಗುವ ಭಾಷೆಯಲ್ಲಿ ವ್ಯವಹರಿಸಿದರಷ್ಟೇ ಮುಂದೆ ಈ ರೀತಿ ಘಟನೆಗಳು ಮರುಕಳಿಸುವುದಿಲ್ಲ ಎಂದು ಯತ್ನಾಳ್ ಭರವಸೆ ನೀಡಿದ್ದರು.

ಕಲ್ಲು ತೂರುವ ಘಟನೆಯಲ್ಲಿ ಮಕ್ಕಳನ್ನು ಬಳಸಿದ್ದರೂ ಸಹ ಕಾನೂನು ರೀತ್ಯ ಅವರ ಪೋಷಕರ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ಗಾಯಾಳುಗಳಿಗೆ ಮಸೀದಿಯ ಆಡಳಿತ ಮಂಡಳಿಯೇ ಪೂರ್ಣ ಖರ್ಚು ವೆಚ್ಚ ಭರಿಸಬೇಕು. ರಾಜ್ಯದ ಯಾವುದೇ ಭಾಗದಲ್ಲಿ ಇನ್ನು ಮುಂದೆ ಕಲ್ಲು ತೂರಾಟವಾದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದ್ದರು.

ಇದೀಗ ಬಸವರಾಜ್ ಪಾಟೀಲ್ ಯತ್ನಾಳ್ ಭಾಷಣದ ವೇಳೆ ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಮದ್ದೂರು ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಮಂಜುನಾಥ್ ಅವರ ದೂರಿನನ್ವಯ ಪ್ರಕರಣ ದಾಖಲಾಗಿದೆ

ಸದ್ಯ ಯತ್ನಾಳ್ ವಿರುದ್ಧ ಬಿಎನ್‌ಎಸ್ ಸೆಕ್ಷನ್ 196(1)(ಚಿ), 299, 353(2) ಅನ್ಯಕೋಮಿಗೆ ಧಕ್ಕೆ ಹಾಗೂ ಕೋಮುಗಳ ನಡುವೆ ವೈರತ್ವ ಉಂಟುಮಾಡುವ ಭಾಷಣ ಮಾಡಿರುವ ಆರೋಪದಡಿ ಎಫ್‌ಐಆರ್ ದಾಖಲಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!