Select Page

Advertisement

Video – ಅಗ್ನಿವೀರರನ್ನು ಕೋಮು ಸಂಘರ್ಷಕ್ಕೆ ಬಳಸಿಕೊಳ್ಳಲಾಗುತ್ತಾ..? ಅಚ್ಚರಿ ಹೇಳಿಕೆ ಕೊಟ್ಟ ಯತ್ನಾಳ್

Video – ಅಗ್ನಿವೀರರನ್ನು ಕೋಮು ಸಂಘರ್ಷಕ್ಕೆ ಬಳಸಿಕೊಳ್ಳಲಾಗುತ್ತಾ..? ಅಚ್ಚರಿ ಹೇಳಿಕೆ ಕೊಟ್ಟ ಯತ್ನಾಳ್

ಬೆಳಗಾವಿ : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಅಗ್ನಿಪಥ ಯೋಜನೆಯಲ್ಲಿ ಆಯ್ಕೆಯಾಗುವ ಅಗ್ನಿವೀರರ ಕುರಿತು ವಿಜಯಪುರ ಬಿಜೆಪಿ ಶಾಸಕ ಅಚ್ಚರಿ ಹೇಳಿಕೆ ನೀಡಿದ್ದಾರೆ‌.

ಸಾಮಾನ್ಯವಾಗಿ ಯುವಕರಿಗೆ ಉದ್ಯೋಗ ಹಾಗೂ ಸೇನಾ ಬಲವರ್ಧನೆ ಕುರಿತು ಅನುಷ್ಠಾನಕ್ಕೆ ಬಂದಿರುವ ಈ ಯೋಜನೆ ಸಂಪೂರ್ಣ ಜಾತಿ ಧರ್ಮವನ್ನು ಮೀರಿದೆ. ಆದರೆ ಇದೇ ಯೋಜನೆಯ ಅಡಿಯಲ್ಲಿ ಬರುವ ಅಗ್ನಿವೀರರ ಕುರಿತು ಯತ್ನಾಳ್ ವಿಭಿನ್ನವಾದ ಹೇಳಿಕೆ‌ ನೀಡುವ ಮೂಲಕ ಅಚ್ಚರಿ‌ ಮೂಡಿಸಿದ್ದಾರೆ.

ಅಗ್ನಿವೀರರ ಕುರಿತು ಈ ರೀತಿ ಮಾತನಾಡಿರುವ ಶಾಸಕ ಯತ್ನಾಳ್ ಅವರು, ಊರರಲ್ಲಿ ಒಂದು ಹತ್ತತ್ತು ಹುಡುಗರು ಇರಲಿ ಎಂದು ಮೋದಿ ಅಗ್ನಿವೀರರರನ್ನು ತಯಾರು ಮಾಡುತ್ತಿದ್ದಾರೆ. ಅವರಿಗೆ ಹೇಗೆ ಗನ್ ಹಿಡಿಯಬೇಕು, ಹೇಗೆ ಹೊಡೆಯಬೇಕು ಎಂಬುದನ್ನು ಕಲಿಸುತ್ತಾರೆ. ಅವರಿಗೆ 25 ಲಕ್ಷ ಹಣ, ಹಾಗೂ ಸರ್ಕಾರಿ ನೌಕರಿ ಕೊಡುತ್ತಾರೆ.

ನಾನು ಸಿಎಂ ಆದರೆ ಅಗ್ನಿವೀರರಿಗೆ ರಾಜ್ಯ ಸರ್ಕಾರದಿಂದ 25 ಲಕ್ಷ ಕೊಡುತ್ತೇನೆ.‌ ನಾಳೆ ನಿಮ್ಮೂರು ಕಾಯಲು ಅವರೇ ಬರಬೇಕು, ಇಲ್ಲವಾದರೆ ನಮ್ಮನ್ನು ಅವರು ಕಲಾಸ್ ಮಾಡುತ್ತಾರೆ. ನೀವೆಲ್ಲರು ಗಟ್ಟಿಯಾಗಿ ಕರ್ನಾಟಕದಲ್ಲಿ ಹಿಂದೂ ರಾಜ್ಯವನ್ನು ತಗೆದುಕೊಂಡು ಬರೋಣ ಎಂದು ಹೇಳಿಕೆ‌ ನೀಡಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!