Select Page

Advertisement

ಜಾತಿ ನಿಂದನೆ ಕೇಸ್ ಗೆ ಹೆದರಿ ಯುವಕ ಆತ್ಮಹತ್ಯೆ ; ಮಗನ ಸಾವಿಗೆ ನೊಂದು ತಂದೆಗೆ ಹೃದಯಾಘಾತ ; ಇಬ್ಬರ ಸಾವಿಗೆ ಕಾರಣವಾಯಿತು ಪ್ರಕರಣ…!

ಜಾತಿ ನಿಂದನೆ ಕೇಸ್ ಗೆ ಹೆದರಿ ಯುವಕ ಆತ್ಮಹತ್ಯೆ ; ಮಗನ ಸಾವಿಗೆ ನೊಂದು ತಂದೆಗೆ ಹೃದಯಾಘಾತ ; ಇಬ್ಬರ ಸಾವಿಗೆ ಕಾರಣವಾಯಿತು ಪ್ರಕರಣ…!

ಯಾದಗಿರಿ : ಜಾತಿ ನಿಂದನೆ ಪ್ರಕರಣಕ್ಕೆ ಹೆದರಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದು. ಯುವಕನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆತನ ತಂದೆಯೂ ಹೃದಯಾಘಾತದಿಂದ ಮೃತಪಟ್ಟ ಘಟನೆ ಯಾದಗಿರಿ ಜಿಲ್ಲೆಯ ವಡಗೇರ ಪಟ್ಟಣದಲ್ಲಿ ನಡೆದಿದೆ.

ಜಮೀನಿನಲ್ಲಿ ದಾರಿ ವಿಚಾರಕ್ಕೆ ಕಳೆದ ಒಂದು ವಾರದ ಹಿಂದೆ ವಡಗೇರ ಪಟ್ಟಣದ ದಲಿತ ಕುಟುಂಬದ ಜೊತೆ ಜಗಳವಾಗಿತ್ತು. ಹಿರಿಯರ ಸಮ್ಮುಖದಲ್ಲಿ ಜಗಳ ಬಗೆಹರಿದಿದ್ದರು, ದಲಿತ ಸಮುದಾಯದ ಯುವಕ ಜಾತಿ ನಿಂದನೆ ಪ್ರಕರಣ ದಾಖಲಿಸುವುದಾಗಿ ಅವಾಜ್ ಹಾಕಿದ್ದ.‌

ಆದರೆ ಬೇರೆ ಊರಿಂದ‌ ಬಂದ ದಲಿತ ಮುಖಂಡ ಜಾತಿ‌ ನಿಂದನೆ ಕೇಸ್ ದಾಖಲು ಮಾಡಲು ಮುಂದಾಗಿದ್ದರಿಂದ ಹೆದರಿದ ಯುವಕ ಮಹೆಬೂಬ್ ಅಲಿ (22) ಆತ್ಮಹತ್ಯೆ ಮಾಡಿಕೊಂಡಿದ್ದ. ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು.

ಮಗನ ಸಾವಿನ ಸುದ್ದಿ ತಿಳಿದ ಸೈಯದ್ ಅಲಿ (50) ಹೃದಯಾಘಾತ ಸಂಭವಿಸಿದೆ. ಆತ್ಮಹತ್ಯೆ ಸುದ್ದಿ ತಿಳಿದು ಶಾಕ್ ಗೆ ಒಳಗಾದ ಸೈಯದ್ ನನ್ನು ಕಲಬುರಗಿ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ವಡಗೇರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.




Advertisement

Leave a reply

Your email address will not be published. Required fields are marked *

error: Content is protected !!