Select Page

Advertisement

ಅಥಣಿ : ಬಾಗಿಲು ಮುಚ್ಚಿದ ತೇರದಾಳ ವಿಜ್ಞಾನ ಕಾಲೇಜು : 780 ವಿದ್ಯಾರ್ಥಿಗಳ ಭವಿಷ್ಯ ಅತಂತ್ರ

ಅಥಣಿ : ಬಾಗಿಲು ಮುಚ್ಚಿದ          ತೇರದಾಳ ವಿಜ್ಞಾನ ಕಾಲೇಜು : 780 ವಿದ್ಯಾರ್ಥಿಗಳ ಭವಿಷ್ಯ ಅತಂತ್ರ


ಅಥಣಿ : ಸುಳ್ಳು ದಾಖಲೆ ನೀಡಿ ಪದವಿ ಪೂರ್ವ ಶಿಕ್ಷಣ ಸಂಸ್ಥೆ ನಡೆಸಲು ಅನುಮತಿ ಪಡೆದಿದ್ದ ಅಥಣಿಯ ತೇರದಾಳ ವಿಜ್ಞಾನ ಪಿಯು ಕಾಲೇಜು ಮಾನ್ಯತೆಯನ್ನು ರದ್ದುಗೊಳಿಸಿ ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ ನಿರ್ದೇಶಕರು ಆದೇಶ ಹೊರಡಿಸಿದೆ.

ಅಥಣಿ ಪಟ್ಟಣದ ಹೊರವಲಯದಲ್ಲಿ 2019-20 ನೇ ಸಾಲಿನಲ್ಲಿ ಆರಂಭಗೊಂಡ  ಶ್ರೀ ಅಣ್ಣಪ್ಪ ತೇರದಾಳ ಗ್ರಾಮೀಣಾಭಿವೃದ್ಧಿ ಶಿಕ್ಷಣ ಸಂಸ್ಥೆಯ ತೇರದಾಳ ವಿಜ್ಞಾನ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿ ನಕಲಿ ದಾಖಲೆ ಸೃಷ್ಟಿಸಿದೆ ಎಂದು ಆನಂದ ಎಂಬುವವರು ದೂರು ದಖಲಿಸಿದ್ದರು.‌

ಈ ದೂರು ಆಧರಿಸಿ ತೇರದಾಳ ವಿಜ್ಞಾನ ಪಿಯು ಕಾಲೇಜಿನ ದಾಖಲೆ ಪರಿಶೀಲನೆ ಮಾಡಿದಾಗ. ನಕಲಿ ದಾಳಲೆ ಸೃಷ್ಟಿಸಿದ್ದು ಬಯಲಾಗಿದೆ. ಸಧ್ಯ ಕಾಲೇಜಿನ ಮಾನ್ಯತೆ ರದ್ದು ಮಾಡಿರುವ ಹಿನ್ನಲೆಯಲ್ಲಿ 780 ವಿದ್ಯಾರ್ಥಿಗಳ ಭವಿಷ್ಯ ಅತಂತ್ರದಲ್ಲಿದೆ.

ಪ್ರಸಕ್ತ ವರ್ಷದಲ್ಲಿ ಈಗಿನಿಂದ ಹೊಸದಾಗಿ ಯಾವುದೇ ವಿದ್ಯಾರ್ಥಿಗಳ ದಾಖಲಾತಿ ಮಾಡಿಕೊಳ್ಳುವಂತಿಲ್ಲ. ಪ್ರಸ್ತುತ ದಾಖಲಾಗಿರುವ ವಿದ್ಯಾರ್ಥಿಗಳನ್ನು ಹತ್ತಿರದ ಸರಕಾರಿ ಕಾಲೇಜಿನಲ್ಲಿ ವಿದ್ಯಾಭ್ಯಾಸಕ್ಕೆ ಅವಕಾಶ ಮಾಡಿಕೊಡಲು ತಿಳಿಸಲಾಗಿದೆ.


Advertisement

Leave a reply

Your email address will not be published. Required fields are marked *

error: Content is protected !!