ಪ್ರಜ್ವಲ್ ರೇವಣ್ಣ ಪ್ರಕರಣ ವಿರುದ್ಧ ಧ್ವನಿ ಎತ್ತಿದ್ದ AAP ನಾಯಕಿಗೆ ಕೇಜ್ರಿವಾಲ್ ಪಿಎ ಇಂದಲೇ ಹಲ್ಲೆ
ಬೆಂಗಳೂರು : ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮೇಲಿನ ಪ್ರಕರಣದ ವಿರುದ್ಧ ಧ್ವನಿ ಎತ್ತಿದ್ದ AAP ಮುಖಂಡೆ ಸ್ವಾತಿ ಮಾಲಿವಾಲ್ ( Swati maliwal ) ಅವರ ಮೇಲೆಯೇ ದೌರ್ಜನ್ಯ ಎಸಗಲಾಗಿದೆ. ಈ ಕುರಿತು ಸ್ವಾತಿ ಪ್ರಕರಣ ದಾಖಲಿಸಿದ್ದಾರೆ.
ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರ ಆಪ್ತ ಸಹಾಯಕ ವಿಭವ್ ಕುಮಾರ ಎಂಬಾತ ಸ್ವಾತಿ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಕುರಿತು ಪ್ರಕರಣ ದಾಖಲಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಮಹಿಳಾ ಆಯೋಗ ವಿಭವ್ ಗೆ ನೋಟಿಸ್ ನೀಡಿದೆ.
ಪ್ರಜ್ವಲ್ ರೇವಣ್ಣ ಪ್ರಕರಣ ಹಿಡಿದು ಬಿಜೆಪಿ ಮೇಲೆ ಮುಗಿಬಿದ್ದಿದ್ದ ವಿರೋಧ ಪಕ್ಷದ ನಾಯಕರಿಗೆ ಆಪ್ ಸಿಎಂ ಆಪ್ತ ಕಾರ್ಯದರ್ಶಿ ತಮ್ಮದೆ ಪಕ್ಷದ ಮಹಿಳೆ ಮೇಲೆ ಹಲ್ಲೆ ನಡೆಸಿರುವ ಘಟನೆ ಸಾಕಷ್ಟು ಮುಜುಗರಕ್ಕೆ ಎಡೆಮಾಡಿಕೊಟ್ಟಿದೆ.


