
VIDEO : ಪ್ರವಚನ ಮಾಡುತ್ತಲೇ ಪ್ರಾಣ ಬಿಟ್ಟ ಸ್ವಾಮೀಜಿ

ಬೆಳಗಾವಿ : ಪ್ರವಚನ ಮಾಡುತ್ತಿರುವಾಗಲೇ ವೇದಿಕೆ ಮೇಲೆ ಸ್ವಾಮೀಜಿ ಪ್ರಾಣ ಬಿಟ್ಟ ಘಟನೆ, ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬಳೋಬಾಳಗ ಗ್ರಾಮದಲ್ಲಿ ನಡೆದಿದೆ.
ಬಳೋಬಾಳಗ ಮಠದ ಸಂಗನಬಸವ ಮಹಾಸ್ವಾಮೀಜಿ (53) ನವಂಬರ್ 6 ರಂದು ತಮ್ಮದೇ ಹುಟ್ಟು ಹಬ್ಬ ಆಚರಿಸಿಕೊಂಡು ಭಕ್ತರಿಗೆ ಆಶಿರ್ವಚನ ನೀಡುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತವಾಗಿದ್ದು ಸ್ಥಳದಲ್ಲೇ ಲಿಂಗೈಕ್ಯರಾಗಿದ್ದಾರೆ.
ಬಸವಯೋಗ ಮಂಟಪ ಟ್ರಸ್ಟ್ ಬಳೋಬಾಳ್ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಾಮೀಜಿ ಪ್ರವಚನ ನೀಡುತ್ತಿದ್ದರು. ಈ ಸಂದರ್ಭದಲ್ಲಿ ಹೃದಯಾಘಾತವಾಗಿದೆ. ಪಕ್ಕದಲ್ಲೇ ಕುಳಿತ ಇತರೇ ಸ್ವಾಮೀಜಿಗಳು ನೋಡುವಷ್ಟರಲ್ಲಿ ಸಂಗನಬಸವ ಸ್ವಾಮೀಜಿ ಮೃತಪಟ್ಟಿದ್ದರು. ಸ್ವಾಮೀಜಿ ಅಗಲಿಕಿಂದ ಭಕ್ತವೃಂದ ಮರುಗುತ್ತಿದೆ.