ಉತ್ತರ ಕರ್ನಾಟಕದ ಖ್ಯಾತ ಸ್ವಾಮೀಜಿ ಕಾಮಪುರಾಣ..? ಸಂಧಾನಕ್ಕೆ ಕುಳಿತಾಗ ಒದೆ ತಿಂದ, ವಿಜಯಪುರ ಭಕ್ತರ ಕೈ ಸೇರಿದ ಅಶ್ಲೀಲ ವೀಡಿಯೋ…!
ಬೆಳಗಾವಿ : ಉತ್ತರ ಕರ್ನಾಟಕ ಭಾಗದ ಪ್ರಮುಖ ಸಮುದಾಯವೊಂದರ ಸ್ವಾಮೀಜಿ ಮೂವರು ಮಹಿಳೆಯರ ಜೊತೆ ಖಾಸಗಿಯಾಗಿ ಕಳೆದ ವೀಡಿಯೋ ಭಕ್ತರ ಕೈ ಸೇರಿದ್ದು ಸಂಧಾನಕ್ಕೆ ಹೋದಾಗ ಸ್ವಾಮೀಜಿಗೆ ಸಮುದಾಯದ ಮುಖಂಡರೆ ಒದೆ ಕೊಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹೌದು ಪ್ರಬಲ ಸಮುದಾಯದ ಸ್ವಾಮಿಯ ಕಳ್ಳಾಟದ ವೀಡಿಯೋ ಭಕ್ತರ ಕೈ ಸೇರಿದೆ. ವಿಜಯಪುರ ಮೂಲದ ಮಹಿಳೆ ಬೆಂಗಳೂರಿನಲ್ಲಿ ವಾಸವಿದ್ದು ಅವಳ ಜೊತೆ ಸ್ವಾಮೀಜಿ ಕಳ್ಳಾಟ ಆಡಿದ್ದಾರೆ. ಕೊನೆಗೆ ಅವಳನ್ನು ಸಂಧಾನಕ್ಕೆ ಕಡೆದು ಧಮ್ಕಿ ಹಾಕುವ ಕೆಲಸ ಮಾಡಿದ್ದಾನೆ.
ಈ ವೇಳೆ ಸಂಧಾನಕ್ಕೆ ಬಂದಿದ್ದ ಸಮುದಾಯದ ಮುಖಂಡರೇ ಸ್ವಾಮೀಜಿಗೆ ಸರಿಯಾಗಿ ಥಳಿಸಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಓಡಾಡುತ್ತಿದೆ. ಕೊನೆಗೆ ಸ್ವಾಮೀಜಿ ಸ್ವಯಂ ಚಿಕಿತ್ಸೆ ಪಡೆದು ಸುಧಾರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಕಳ್ಳ ಸ್ವಾಮೀಜಿಯ ಕಳ್ಳಾಟವನ್ನು ರಾಜ್ಯದ ಪ್ರತಿಷ್ಠಿತ ಪತ್ರಿಕೆಯೊಂದು ಬಯಲು ಮಾಡಿದೆ. ಈ ಕುರಿತು ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿದ್ದು ಈ ಸುದ್ದಿ ಸಾಕಷ್ಟು ಸಂಚಲನ ಮೂಡಿಸಿದೆ.


