Select Page

Advertisement

SSLC ಫಲಿತಾಂಶ ; ಉತ್ತಮ ಶ್ರೇಣಿಯಲ್ಲಿ ಅಣ್ಣ, ತಂಗಿ ತೇರ್ಗಡೆ

SSLC ಫಲಿತಾಂಶ ; ಉತ್ತಮ ಶ್ರೇಣಿಯಲ್ಲಿ ಅಣ್ಣ, ತಂಗಿ ತೇರ್ಗಡೆ

ಅಥಣಿ : ಈಗಾಗಲೇ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿದ್ದು ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಬದುಕಿನ ಮಹತ್ವದ ಘಟ್ಟದಲ್ಲಿ ಸಾಧನೆ ಶಿಖರ ಏರಿದ್ದಾರೆ. ಈ ಮಧ್ಯೆ ಅಣ್ಣ, ತಂಗಿ ಇಬ್ಬರು ಉತ್ತಮ ಶ್ರೇಣಿಯಲ್ಲಿ ಪಾಸಾಗುವ ಮೂಲಕ ಹೆತ್ತವರು ಹಾಗೂ ಶಿಕ್ಷಕರು ಸಂಭ್ರಮಿಸುವಂತೆ ಮಾಡಿದ್ದಾರೆ.

ಅಥಣಿ ತಾಲೂಕಿನ ನದಿ ಇಂಗಳಗಾಂಗ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತೀಕ ಶಂಕರ್ ಟಕ್ಕಣ್ಣವರ್ 625 ಕ್ಕೆ 621 ಅಂಕ ಪಡೆಯುವ ಮೂಲಕ‌ ಮಹತ್ವದ ಸಾಧನೆ ಮಾಡಿದ್ದಾರೆ.‌

ಇನ್ನೂ ಈತನ ಸಹೋದರಿ ಪ್ರತೀಕ್ಷಾ ಶಂಕರ್ ಟಕ್ಕಣ್ಣವರ ಇದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತ ಅಣ್ಣನ ಹಾದಿಯಲ್ಲೇ ಸಾಗಿದ್ದು 625 ಅಂಕಗಳ ಪೈಕಿ 607 ಅಂಕ ಪಡೆಯುವ ಮೂಲಕ ಸಾಧನೆ ಮೆರೆದಿದ್ದಾರೆ.‌

ಬಡ ಕುಟುಂಬದಲ್ಲಿ ಜನಿಸಿದ್ದ ಈ ಇಬ್ಬರು ವಿದ್ಯಾರ್ಥಿಗಳು ಸಧ್ಯ 10 ನೇ ತರಗತಿ ಪರೀಕ್ಷೆಯಲ್ಲಿ ಮಹತ್ವದ ಸಾಧನೆ ಮಾಡಿದ್ದು ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!