ಬೆಳಗಾವಿಯ ಓರ್ವರಿಗೆ ಒಲಿದ ಮಂತ್ರಿ ಭಾಗ್ಯ ; ಪ್ರಮಾಣವಚನ ಪಡೆಯುವವರು ಯಾರು..?
ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹಾಗೆಯೇ ಉಪ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಕೂಡಾ ಪ್ರಮಾಣವಚನ ಪಡೆಯಲಿದ್ದು ಇವರ ಜೊತೆ ಎಂಟು ಜನ ಶಾಸಕರು ಮಂತ್ರಿಯಾಗಿ ಭಡ್ತಿ ಪಡೆಯಲಿದ್ದಾರೆ.
ಹೌದು ಶನಿವಾರದಂದೇ ಬೆಂಗಳೂರಿನ ಕಂಠೀರವ ಒಳ ಕ್ರೀಡಾಂಗಣದಲ್ಲಿ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದ್ದು, ರಾಜ್ಯದ ರಾಜ್ಯಪಾಲ ತಾವರ್ ಚಂದ್ ಗೆಹ್ಲೊಟ್ ನೂತನ ಸಿಎಂ ಹಾಗೂ ಸಚಿವರಿಗೆ ಪ್ರಮಾಣವಚನ ಬೋದಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಆಗಮಿಸಲಿದ್ದಾರೆ.
ಇನ್ನೂ ಸಿಎಂ ಸಿದ್ದರಾಮಯ್ಯ ಜೊತೆ ಒಟ್ಟು ಎಂಟು ಜನ ಶಾಸಕರಾಗಿ ಪ್ರಮಾಣವಚನ ಒಡೆಯಲಿದ್ದು, ನಿನ್ನೆ ರಾತ್ರಿ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಪೈನಲ್ ಮಾಡಲಾಗಿದೆ. ಈ ಕುರಿತು ಮಧ್ಯರಾತ್ರಿ ಶಾಸಕರಿಗೆ ಕರೆ ಮಾಡಿ ಮಾಹಿತಿ ನೀಡಲಾಗಿದ್ದು ಒಟ್ಟು ಎಂಟು ಜನರು ನೂತನ ಸಚಿವರಾಗಿ ಪ್ರಮಾಣವಚನ ಪಡೆಯಲಿದ್ದಾರೆ.

ಬೆಳಗಾವಿಯ ಯಮಕನಮರಡಿ ಕ್ಷೇತ್ರದ ಶಾಸಕ ಹಾಗೂ ಕಾಂಗ್ರೆಸ್ ಹಿರಿಯ ನಾಯಕರಾದ ಸತೀಶ್ ಜಾರಕಿಹೊಳಿ ಅವರಿಗೆ ಮಂತ್ರಿ ಭಾಗ್ಯ ಲಭಿಸಿದೆ. ಇದರಿಂದ ಮತ್ತೊಮ್ಮೆ ಬೆಳಗಾವಿ ರಾಜಕಾರಣದ ಮಾಸ್ಟರ್ ಮೈಂಡ್ ಸತೀಶ್ ಜಾರಕಿಹೊಳಿ ಮತ್ತೊಮ್ಮೆ ಸಚಿವರಾಗಿ ಸೇವೆ ನೀಡಲಿದ್ದಾರೆ. ಇನ್ನೂ ಸಚಿವ ಸ್ಥಾನಕ್ಕೆ ಪೈಪೋಟಿ ನೀಡಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು, ಲಕ್ಷಣ ಸವದಿ ಅವರಿಗೆ ಎರಡನೇ ಅವಧಿಯಲ್ಲಿ ಸ್ಥಾನ ನೀಡುವ ಸಾಧ್ಯತೆ ದಟ್ಟವಾಗಿದೆ.
ಪ್ರಮಾಣವಚನ ಪಡೆಯಲಿರುವವರ ಪಟ್ಟಿ :
ಸಿದ್ದರಾಮಯ್ಯ – ಸಿಎಂ
ಡಿ.ಕೆ ಶಿವಕುಮಾರ್ – ಡಿಸಿಎಂ
ಜಿ. ಪರಮೇಶ್ವರ – ಸಚಿವ
ಕೆ.ಹೆಚ್ ಮುನಿಯಪ್ಪ – ಸಚಿವ
ಎಂ.ಬಿ ಪಾಟೀಲ್ – ಸಚಿವ
ಕೆ.ಜೆ ಜಾರ್ಜ್ – ಸಚಿವ
ಜಮೀರ್ ಅಹಮ್ಮದ್ ಖಾನ್ – ಸಚಿವ
ಪ್ರಿಯಾಂಕ ಖರ್ಗೆ – ಸಚಿವ
ಸತೀಶ್ ಜಾರಕಿಹೊಳಿ – ಸಚಿವ
ರಾಮಲಿಂಗಾರೆಡ್ಡಿ – ಸಚಿವ


