Select Page

Advertisement

ಸ್ವ ಕ್ಷೇತ್ರದಲ್ಲೇ ಶಶಿಕಲಾ‌ ಜೊಲ್ಲೆಗೆ ಕಪ್ಪು ಬಾವುಟ ಪ್ರದರ್ಶನ ; ಪೂಜೆ ಮಾಡಿದ್ದ ಅಡಿಗಲ್ಲು ಒಡೆದು ಆಕ್ರೋಶ

ಸ್ವ ಕ್ಷೇತ್ರದಲ್ಲೇ ಶಶಿಕಲಾ‌ ಜೊಲ್ಲೆಗೆ ಕಪ್ಪು ಬಾವುಟ ಪ್ರದರ್ಶನ ; ಪೂಜೆ ಮಾಡಿದ್ದ ಅಡಿಗಲ್ಲು ಒಡೆದು ಆಕ್ರೋಶ

ನಿಪ್ಪಾಣಿ : ಗ್ರಾಮ ಪಂಚಾಯತಿ ಕಟ್ಟದ ಉದ್ಘಾಟನೆ ವಿಚಾರವಾಗಿ ಮಾಜಿ ಸಚಿವೆ ಶಶಿಕಲಾ ಜೊಲ್ಲೆಗೆ ಸ್ವ ಕ್ಷೇತ್ರ‌ದಲ್ಲೇ ಕಪ್ಪು ಬಾವುವ ಪ್ರದರ್ಶನ ಮಾಡಿರುವ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಯರನಾಳ ಗ್ರಾಮ ಪಂಚಾಯತಿ ಕಟ್ಟಡ ಉದ್ಘಾಟನೆ ವಿಚಾರವಾಗಿ ಸ್ಥಳೀಯ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರ ಮಧ್ಯೆ ವಾಗ್ವಾದ ಏರ್ಪಟ್ಟಿದ್ದು ತರಾತುರಿಯಲ್ಲಿ ಉದ್ಘಾಟನೆ ಕಾರ್ಯಕ್ರಮ ನೆರವೇರಿಸಿದ್ದ ಸಚಿವೆ ಶಶಿಕಲಾ‌ ಜೊಲ್ಲೆಗೆ ಕಪ್ಪು ಬಾವುಟ ಪ್ರದರ್ಶನ ಮಾಡಲಾಗಿದೆ.

ಆಗಸ್ಟ್. 17 ರಂದು ಕಾಂಗ್ರೆಸ್ ನಿಂದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೋಳಿ ನೇತೃತ್ವದಲ್ಲಿ ಕಟ್ಟಡ ಉದ್ಘಾಟನೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಆದರೆ ಬಿಜೆಪಿ ತರಾತುರಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿ ಶಾಸಕಿ ಶಶಿಕಲಾ‌ಜೊಲ್ಲೆ ಉದ್ಘಾಟನೆ ನೆರವೇರಿಸಿದ್ದರು.

ಜೊಲ್ಲೆ ಕಟ್ಟಡ ಉದ್ಘಾಟನೆಗೆ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ. ಪೂಜೆ ಸಲ್ಲಿಸಿದ್ದ ಉದ್ಘಾಟನಾ ಅಡಿಗಲ್ಲು ಒಡೆದು ಹಾಕುವ ಮೂಲಕ ಜೊಲ್ಲೆಗೆ ಕಪ್ಪು ಬಾವುಟ ಪ್ರದರ್ಶನ ಮಾಡಿದ್ದಾರೆ. ಇದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!