ಕೇಂದ್ರ ಸಚಿವರನ್ನು ಭೇಟಿಯಾದ ಶಂಕರಗೌಡ ಪಾಟೀಲ್
ಬೆಳಗಾವಿ : ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಬಿಜೆಪಿ ಮುಖಂಡ ಶಂಕರ್ ಗೌಡ ಪಾಟೀಲ್ ಭೇಟಿಯಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಬೆಳಗಾವಿಗೆ ಸಂಬಂಧಿಸಿದಂತೆ ಬೆಂಗಳೂರು – ಬೆಳಗಾವಿ ವಂದೇ ಭಾರತ ರೈಲು ವಿಸ್ತರಣೆ, ನಗರದ ಮೂರನೇ ಗೇಟ್ ಹತ್ತಿರ ಓವರ್ ಬ್ರಿಡ್ಜ್ ಪೂರ್ಣಪ್ರಮಾಣ ಕಾಮಗಾರಿ ಆರಂಭಿಸಲು ಹಾಗೂ ಬೆಳಗಾವಿ ಕಿತ್ತೂರು, ಧಾರವಾಡ ರೈಲು ಮಾರ್ಗ ಯೋಜನೆ ಜಾರಿ ಅನುಷ್ಠಾನಕ್ಕೆ ಶೀಘ್ರ ಚಾಲನೆ ನೀಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಸಂದದ ಕ್ಯಾಪ್ಟನ್ ಬ್ರಿಜೇಶ್ ಚೌಟ ಉಪಸ್ಥಿತರಿದ್ದರು.


