ಮತ್ತೆ ಬಿಜೆಪಿ ಸೇರ್ತಾರಾ ಲಕ್ಷ್ಮಣ ಸವದಿ ; ಏನಂದ್ರು ಸಾಹುಕಾರ್
ಬೆಳಗಾವಿ : ಜಗದೀಶ್ ಶೆಟ್ಟರ್ ಮರಳಿ ಬಿಜೆಪಿಗೆ ಹೊಗಿದ್ದು ಕಾಂಗ್ರೆಸ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಅವರು ಅನಿರೀಕ್ಷಿತವಾಗಿ ಬಿಜೆಪಿ ಪಕ್ಕಕ್ಕೆ ಮರಳಿ ಹೋಗಿದ್ದಾರೆ. ನನಗೂ ಕೂಡಾ ಬಿಜೆಪಿಗೆ ಬರುವಂತೆ ಹಿರಿಯ ನಾಯಕರು ಸಂಪರ್ಕ ಮಾಡುತ್ತಿದ್ದಾರೆ ಎಂದು ಅಥಣಿ ಶಾಸಕ ಲಕ್ಷ್ಮಣ್ ( Laxman Savadi ) ಸವದಿ ಹೆಳಿದರು.
ವಾಪಸ್ ಬಿಜೆಪಿಗೆ ಬರುವಂತೆ ನನಗೂ ಅನೇಕ ನಾಕರು ಒತ್ತಡ ಹೇರಿದ್ದಾರೆ. ಅನೇಕ ದೊಡ್ಡ ನಾಯಕರು ಸಂಪರ್ಕದಲ್ಲಿದ್ದಾರೆ. ಕಳೆದ ಹಲವು ವರ್ಷಗಳಿಂದ ನಾನು ಬಿಜೆಪಿ ಪಕ್ಷದಲ್ಲಿದ್ದೆ. ಅಲ್ಲಿಯೂ ಒಳ್ಳೆಯ ಸ್ನೇಹಿತರಿದ್ದು, ಸಹಜವಾಗಿ ನನ್ನ ಸಂಪರ್ಕ ಮಾಡುತ್ತಿದ್ದಾರೆ ಎಂದರು.
ಸಾರ್ವಜನಿಕವಾಗಿ ನಾನು ಏನು ಹೇಳುವುದಿಲ್ಲ. ಬಿಜೆಪಿ ಪಕ್ಷ ನನ್ನ ಸೇರಿಸಿಕೊಳ್ಳಲು ಆಸಕ್ತಿ ಹೊಂದಿದ್ದಾರೆ. ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷವನ್ನು ಬಿಡುವುದಿಲ್ಲ. ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದವರು ಮೂಲೆಗುಂಪು ಆಗಿದ್ದಾರೆ ವಿಪಕ್ಷ ನಾಯಕ ಆರ್ ಅಶೋಕ್ ಹೆಳಿದ ವಿಚಾರ ಮಾತನಾಡಿ, ಎಲ್ಲದಕ್ಕೂ ಕಾಲ ಸಂದರ್ಭ ಉತ್ತರ ಕೊಡುತ್ತದೆ. ನಾನು ಮತ್ತು ನನ್ನ ಕುಟುಂಬದಿಂದ ಯಾರು ಲೋಕಸಭಾ ಚುನಾವಣೆ ಸ್ವರ್ಧೆ ಮಾಡುವುದಿಲ್ಲ ಎಂದು ಹೇಳಿದರು.

