Select Page

Advertisement

ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಹರಿದು ಬಂತು ಕೋಟ್ಯಾಂತರ ರೂ. ಕಾಣಿಕೆ

ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಹರಿದು ಬಂತು ಕೋಟ್ಯಾಂತರ ರೂ. ಕಾಣಿಕೆ

ಬೆಳಗಾವಿ: ಸೇರಿದಂತೆ ಇಡೀ ರಾಜ್ಯ ಬೀಕರ ಬರಗಾಲಕ್ಕೆ ತುತ್ತಾಗಿದೆ.ಕುಡಿಯೋಕೆ ನೀರು ದನಕರುಗಳಿಗೆ ಮೇವು ಸಿಗದೆ ಜನ ಪರದಾಡ್ತಿದ್ದಾರೆ. ನಮ್ಮ ಜನರ ಭಕ್ತಿ ಭಾವಕ್ಕೇನು ಕಡಿಮೆ ಇಲ್ಲ ಬರಗಾಲದಲ್ಲೂ ಸಹ ಉತ್ತರ ಕರ್ನಾಟಕದ ಆ ಶಕ್ತಿ ದೇವತೆಯ ಹುಂಡಿಗೆ ಕಾಣಿಕೆ ಭರಪೂರ ಹರಿದು ಬಂದಿದೆ.

ಉತ್ತರ ಕರ್ನಾಟಕದ ಶಕ್ತಿದೇವಿ ಶ್ರೀರೇಣುಕಾ ಯಲ್ಲಮ್ಮ ದೇವಿಯ ಸನ್ನಿದ್ಧಿಗೆ ತೀವ್ರ ಬರಗಾಲದ ನಡುವೆಯೂ ಭಕ್ತರು ಭರಪೂರ ಕಾಣಿಕೆ ಸಮರ್ಪಿಸಿದ್ದು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಈ ವರ್ಷಕ್ಕೆ ಕಾಣಿಕೆ ಆದಾಯದಲ್ಲಿ ಹೆಚ್ಚಾಗಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದ ಹೊರವಲಯದಲ್ಲಿರುವ ಶ್ರೀ ರೇಣುಕಾ ಯಲ್ಲಮ್ಮ ದೇವಿಗೆ ಭಕ್ತರ ಕೊಡುವ ಕಾಣಿಕೆಯಲ್ಲಿ ಹೆಚ್ಚಳವಾಗಿದೆ.

ಬರದ ಬವಣೆ ಮಧ್ಯೆಯೂ ಸವದತ್ತಿ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಭರಪೂರ ಕಾಣಿಕೆ ಹರಿದುಬಂದಿದೆ.  ದೇಶದ ನಾನಾ ಭಾಗದ ಭಕ್ತರಿಂದ ನಗದು, ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ದೇವಸ್ಥಾನದ ಹುಂಡಿಯಲ್ಲಿ ಹಾಕಿ ಭಕ್ತಿ ಸಮರ್ಪಣೆ ಮಾಡಿದ್ದಾರೆ.

ಇನ್ನೂ ದೇಶದ ನಾನಾ ಭಾಗಗಳಿಂದ ಬರುವಂತಹ ಭಕ್ತರು ದೇವಿಗೆ ಹಾಕುವ ಕಾಣಿಕೆಯಲ್ಲಿ ಒಂದೇ ವರ್ಷದಲ್ಲಿ ಹೆಚ್ಚಳವಾಗಿದ್ದು 2023-2024ರ ಅವಧಿಯಲ್ಲಿ 11.23 ಕೋಟಿ ಕಾಣಿಕೆ ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರರೆ 2ಕೋಟಿ 40ಲಕ್ಷ ಹೆಚ್ಚಿಗೆ ಕಾಣಿಕೆ ಸಂಗ್ರಹವಾಗಿದೆ.‌

2022–23ರಲ್ಲಿ 8.01ಕೋಟಿ ನಗದು, 66.28ಲಕ್ಷ ಮೌಲ್ಯದ ಚಿನ್ನ ಮತ್ತು 15.43 ಲಕ್ಷ ಮೌಲ್ಯದ ಬೆಳ್ಳಿ ಆಭರಣ ಸೇರಿ 8.83 ಕೋಟಿಯ ಕಾಣಿಕೆ ಸಂಗ್ರಹವಾಗಿತ್ತು. 2023–24ರಲ್ಲಿ 10.22ಕೋಟಿ ನಗದು, 84.14ಲಕ್ಷ ಚಿನ್ನ ಮತ್ತು 16.65ಲಕ್ಷ ಮೌಲ್ಯದ ಬೆಳ್ಳಿ ಆಭರಣಗಳು ಸೇರಿ 11.23ಕೋಟಿ ಕಾಣಿಕೆ ಸಂಗ್ರಹವಾಗಿದೆ.ಇದರ ಜತೆಗೆ ಕೆನಡಾ ದೇಶದ ಎರಡು ಕರೆನ್ಸಿ ನೋಟುಗಳು ಪತ್ತೆಯಾಗಿವೆ.

ಇನ್ನೂ ಈ ಕುರಿತು ಪ್ರತಿಕ್ರಿಯೆ ನೀಡಿದ ಯಲ್ಲಮ್ಮ ದೇವಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಸ್‍ಪಿಬಿ ಮಹೇಶ, ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ದೇವಸ್ಥಾನಕ್ಕೆ ಬಂದ ಆದಾಯ ಹೆಚ್ಚಿದೆ. ದೇವಸ್ಥಾನದ ಅಭಿವೃದ್ಧಿಗೆ ಪೂರಕವಾಗಿ ಬಜೆಟ್ ರೂಪಿಸಿದ್ದೇವೆ. ಅದಕ್ಕೆ ಸರ್ಕಾರದಿಂದ ಅನುಮೋದನೆ ಪಡೆದು, ನಾನಾ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಒಟ್ಟಾರೆ, ಉತ್ತರ ಕರ್ನಾಟಕದ ಶಕ್ತಿದೇವಿ ಯಲ್ಲಮ್ಮನಿಗೆ ಬರಗಾಲದ ಬವಣೆಯ ನಡುವೆಯೂ ಭರ್ಜರಿ ಕಾಣಿಕೆ ಹುಂಡಿ ಸಂಗ್ರವಾಗಿದ್ದು ದೇಶದ ವಿವಿಧೆಡೆಯಿಂದ ಬರುವ ಭಕ್ತರು, ನಗದು, ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ದೇವಸ್ಥಾನದ ಹುಂಡಿಯಲ್ಲಿ ಹಾಕಿ ಭಕ್ತಿ ಸಮರ್ಪಿಸಿದ್ದಾರೆ. ಈ ಸಲ ಬರದ ಬವಣೆ ಮಧ್ಯೆಯೂ ಕಾಣಿಕೆಯ ಮಹಾಪೂರವೇ ಹರಿದುಬಂದಿದೆ.

Advertisement

Leave a reply

Your email address will not be published. Required fields are marked *

error: Content is protected !!