Select Page

Advertisement

ಕಾಂಗ್ರೆಸ್ ತೆಕ್ಕೆಗೆ ಸವದತ್ತಿ ಪುರಸಭೆ ; ಶಾಸಕ ವೈದ್ಯ ಕೈ ಮೇಲುಗೈ

ಕಾಂಗ್ರೆಸ್ ತೆಕ್ಕೆಗೆ ಸವದತ್ತಿ ಪುರಸಭೆ ; ಶಾಸಕ ವೈದ್ಯ ಕೈ ಮೇಲುಗೈ

ಸವದತ್ತಿ : ಸುಮಾರು 15 ವರ್ಷಗಳ ನಂತರ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಿದ್ದು, ಗೆಲುವಿಗಾಗಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಶೃಮಿಸಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಇಲ್ಲಿನ ಪುರಸಭೆ ಸಭಾಂಗಣದಲ್ಲಿ ಮಂಗಳವಾರ ಪುರಸಭೆಯ 2 ನೇ ಅವಧಿಯ ಅಧ್ಯಕ್ಷ – ಉಪಾಧ್ಯಕ್ಷ ಚುನಾವಣೆಗೆ ನಡೆದ ಸಭೆಯಲ್ಲಿ ಶುಭಕೋರಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಪ್ರಾರಂಭವಾಗಿದ್ದು ಎಲ್ಲರ ಸಹಕಾರ ಮುಖ್ಯ. ಕಾಂಗ್ರೆಸ್ ನ ಈ ಗೆಲುವು ಮುಂದುವರೆಯಲಿದೆ ಎಂದರು.

ಮುಂಜಾನೆ 10 ರಿಂದ 12 ರವರಗೆ ಇದ್ದ ನಾಮಪತ್ರ ಸಲ್ಲಿಕೆ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಚೆನ್ನವ್ವ ಗಿರೆಪ್ಪ ಹುಚ್ಚಣ್ಣವರ, ಉಪಾಧ್ಯಕ್ಷ ಸ್ಥಾನಕ್ಕೆ ದಾವಲಬಿ ಮಕ್ತ್ತುಂಸಾಬ ಸನದಿ ಅವರು ಚುನಾವಣಾಧಿಕಾರಿ ಮಲ್ಲಿಕಾರ್ಜುನ ಹೆಗ್ಗಣ್ಣವರ ಅವರಿಗೆ ನಾಮಪತ್ರಗಳನ್ನು ಸಲ್ಲಿಸಿದರು.

ಅಧ್ಯಕ್ಷ ಸ್ಥಾನಕ್ಕೆ ಭುವನೇಶ್ವರಿ ಪಟ್ಟಣಶೆಟ್ಟಿ, ಉಪಾಧ್ಯಕ್ಷ ಸ್ಥಾನಕ್ಕೆ ಶಿವಾನಂದ ಹೂಗಾರ ಸೂಚಕರಾಗಿದ್ದರು. ನಾಮಪತ್ರ ಸಲ್ಲಿಕೆ ನಂತರ ಮಧ್ಯಾಹ್ನ 2 ಗಂಟೆಗೆ ಸಭೆ ಪ್ರಾರಂಭದ ನಂತರ ಒಟ್ಟು 27 ಸದಸ್ಯರು, ಸಂಸದರು ಮತ್ತು ಶಾಸಕರ ಪೈಕಿ 24 ಸದಸ್ಯರು ಮತ್ತು ಶಾಸಕರು ಹಾಜರಿದ್ದರು.

ಚುನಾವಣಾ ಪ್ರಕ್ರೀಯೆಗಳು ಮುಗಿದು, ಈ ಇಬ್ಬರು ಸದಸ್ಯರನ್ನು ಹೊರತು ಪಡಿಸಿ ಬೇರೆ ನಾಮಪತ್ರ ಸಲ್ಲಿಕೆಯಾಗದ ಕಾರಣ ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಚೆನ್ನವ್ವ ಗಿರೆಪ್ಪ ಹುಚ್ಚಣ್ಣವರ, ಉಪಾಧ್ಯಕ್ಷ ಸ್ಥಾನಕ್ಕೆ ದಾವಲಬಿ ಮಕ್ತ್ತುಂಸಾಬ ಸನದಿ ಅವರನ್ನು ಚುನಾವಣಾಧಿಕಾರಿ

ಮಲ್ಲಿಕಾರ್ಜುನ ಹೆಗ್ಗಣ್ಣವರ ಅವಿರೋಧವಾಗಿ ಆಯ್ಕೆಯಾಗಿ ಘೋಷಣೆ ಮಾಡಲಾಯಿತು. ಕಾಂಗ್ರೆಸ್ ಕಾರ್ಯಕರ್ತರು ಒಬ್ಬರಿಗೊಬ್ಬರು ಗುಲಾಲ್ ಎರಚಿ, ಪಟಾಕಿ ಸಿಡಿಸುವ ಮೂಲಕ ಸಂಭ್ರಮಾಚರಿಸಿದರು.

ಈ ವೇಳೆ ಪುರಸಭೆ ಮುಖ್ಯಧಿಕಾರಿ ಸಂಗನಬಸಯ್ಯ ಗದಗಿಮಠ, ಅಶ್ವಥ ವೈದ್ಯ, ಚಂದ್ರು ಶ್ಯಾಮರಾಯನವರ, ಪ್ರಭು ಪ್ರಭುನವರ, ಬಸವರಾಜ ಪ್ರಭುನವರ, ರಾಜಶೇಖರ ಕಾರದಗಿ, ಮಲ್ಲಿಕಾರ್ಜುನ ಪುರದಗುಡಿ, ಮಹಾಬಳೇಶ್ವರ ಪುರದಗುಡಿ, ಮಂಜುನಾಥ ಪಾಚಂಗಿ, ದೀಪಕ ಜಾನ್ವೆಕರ, ಬಸವರಾಜ ಅರಮನಿ ಸೇರಿ ಪುರಸಭೆ ಸದಸ್ಯರು, ಕಾಂಗ್ರೆಸ್ ಪ್ರಮುಖರು, ಕಾರ್ಯಕರ್ತರು ಇದ್ದರು.

Advertisement

Leave a reply

Your email address will not be published. Required fields are marked *

error: Content is protected !!