Select Page

Advertisement

ಸವದಿ ಮನೆಗೆ ಹೋಗದ ಸಾಹುಕಾರ್ ; ವೇದಿಕೆಯಲ್ಲಿ ಕೊಟ್ಟ ಉತ್ತರ ಏನು…?

ಸವದಿ ಮನೆಗೆ ಹೋಗದ ಸಾಹುಕಾರ್ ; ವೇದಿಕೆಯಲ್ಲಿ ಕೊಟ್ಟ ಉತ್ತರ ಏನು…?

ಅಥಣಿ : ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟನಾ ಸಮಾರಂಭಕ್ಕೆ ಶುಕ್ರವಾರ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಸೇರಿದಂತೆ ಮಂತ್ರಿಮಂಡಲದ ಅನೇಕ ಸಚಿವರು ಆಗಮಿಸಿದ್ದರು. ಹೆಲಿಕಾಪ್ಟರ್ ಮೂಲಕ ಅಥಣಿಗೆ ಬಂದ ಸಿಎಂ ಮೊದಲು ಭೇಟಿ ನೀಡಿದ್ದು ಸವದಿ ನಿವಾಸಕ್ಕೆ. 

ಈ ಸಂದರ್ಭದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಅನೇಕರು ಲಕ್ಷ್ಮಣ ಸವದಿ ಮನೆಗೆ ಭೇಟಿ ನೀಡಿದರು. ಆದರೆ ಈ ಸಂದರ್ಭದಲ್ಲಿ ಅಥಣಿಯಲ್ಲಿ ಇದ್ದ ಲೋಕೋಪಯೋಗಿ ಹಾಗೂ ಬೆಳಗಾವಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಲಕ್ಷ್ಮಣ ಸವದಿ ನಿವಾಸಕ್ಕೆ ತೆರಳಲಿಲ್ಲ.

ಅಥಣಿಯ ಪ್ರವಾಸಿ ಮಂದಿರಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಇವರು ಸವದಿ ಮನೆಯತ್ತ ಮುಖ ಮಾಡಲಿಲ್ಲ. ಲಕ್ಷ್ಮಣ ಸವದಿ ಮನೆಗೆ ಬರುವಂತೆ ಸಾಹುಕಾರ್ ಗೆ ಆಹ್ವಾನ ನೀಡಲಿಲ್ಲವಾ ಅಥವಾ, ಸತೀಶ್ ಜಾರಕಿಹೊಳಿ ಹೋಗುವ  ಮನಸ್ಸು ಮಾಡಲಿಲ್ಲವಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. 

ಇನ್ನೂ ಕೊಕಟನೂರಿನಲ್ಲಿ ಭಾಷಣ ಮಾಡುವ ಸಂದರ್ಭದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಸವದಿಗೆ ಮಾತಿನಲ್ಲೇ ಟಾಂಗ್ ನೀಡಿದರು. ಅನೇಕ ಅಭಿವೃದ್ಧಿ ಕಾಮಗಾರಿಯನ್ನು ಅಥಣಿಗೆ ಕೊಡುವಂತೆ ಸಿಎಂ ಹಾಗೂ ಡಿಸಿಎಂ ಬಳಿ ಸವದಿ ಮನವಿ ಮಾಡಿದ್ದರು. ಇದಕ್ಕೆ ಸತೀಶ್ ಜಾರಕಿಹೊಳಿ ಜಿಲ್ಲೆಯಲ್ಲಿ ಇನ್ನೂ ಅನೇಕ ಶಾಸಕರಿದ್ದಾರೆ. ನಿಮ್ಮ ಜೊತೆ ಅವರನ್ನು ತಗೆದುಕೊಂಡು ಹೋಗುವ ಜವಾಬ್ದಾರಿ ನಮ್ಮ‌ ಮೇಲಿದೆ ಎಂದರು. 

ಸವದಿ ಕೇಳಿರುವ ಎಲ್ಲಾ ಯೋಜನೆಗಳಿಗೂ ವೇದಿಕೆ ಮೇಲಿದ್ದ ಸಿಎಂ ಸೇರಿದಂತೆ ಅನೇಕ ಸಚಿವರು ಸಕಾರಾತ್ಮಕ ಉತ್ತರ ಕೊಡಲೇ ಇಲ್ಲ. ಗ್ಯಾರಂಟಿ ಯೋಜನೆ ಬಗ್ಗೆ ಮಾತನಾಡಿದರೇ ಹೊರತು ಅನುದಾನ ಕೊಡುವ ವಿಚಾರದಲ್ಲಿ ಸ್ಪಂಧನೆ ದೊರೆಯಲಿಲ್ಲ. 

ಸಿಎಂ ಹಾಗೂ ಡಿಸಿಎಂ ಕೊಡಾ ಮುಂಬರುವ ದಿನಗಳಲ್ಲಿ ನಿಮ್ಮ ಭೇಡಿಕೆ ಈಡೇರಿಸುತ್ತೇವೆ. ಆದರೆ ಸಧ್ಯಕ್ಕೆ ನಿಮಗೆ ಮಾತಿನ ಭರವಸೆ ನೀಡುವ ಸಂಧರ್ಭದಲ್ಲಿ ನಾವಿಲ್ಲ ಎನ್ನುವ ಮೂಲಕ ಸವದಿ ಕೇಳಿದ ಅಷ್ಟು ಯೋಜನೆಗಳಿಗೆ ನಾಳೆ ನೋಡೋಣ ಎಂಬುದಷ್ಟೇ ಉತ್ತವಾಗಿತ್ತು.

Advertisement

Leave a reply

Your email address will not be published. Required fields are marked *

error: Content is protected !!