Select Page

Advertisement

ದೆಹಲಿಯಿಂದ ಮಹತ್ವದ ಸಂದೇಶ ಕೊಟ್ಟ ಸಾಹುಕಾರ್ ; ಬದಲಾವಣೆ ನಿಶ್ಚಿತ…?

ದೆಹಲಿಯಿಂದ ಮಹತ್ವದ ಸಂದೇಶ ಕೊಟ್ಟ ಸಾಹುಕಾರ್ ; ಬದಲಾವಣೆ ನಿಶ್ಚಿತ…?


ಬೆಂಗಳೂರು : ಸಿಎಂ ಬದಲಾವಣೆ ಕುರಿತು ಇಷ್ಟು ದಿನ‌ ನಡೆಯುತ್ತಿದ್ದ ಗೊಂದಲಗಳ ನಡುವೆ ಬೆಳಗಾವಿ ಸಾಹುಕಾರ ಸತೀಶ್ ಜಾರಕಿಹೊಳಿ ದೆಹಲಿ ಭೇಟಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ.

ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಸತೀಶ್ ಜಾರಕಿಹೊಳಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಇವರ ಜೊತೆಗೆ ಮಾಜಿ ಸಚಿವ ಕೆ.ಎನ್ ರಾಜಣ್ಣ ಅವರೂ ಉಪಸ್ಥಿತರಿದ್ದರು.

ಭೇಟಿ ನಂತರ ಪ್ರತಿಕ್ರಿಯೆ ನೀಡಿದ ಸಚಿವ ಸತೀಶ್ ಜಾರಕಿಹೊಳಿ. ರಾಜ್ಯದಲ್ಲಿ ಸೃಷ್ಟಿಯಾಗಿರುವ ಗೊಂದಲಗಳಿಗೆ ಸಂಬಂಧಿಸಿದಂತೆ ಹೈಕಮಾಂಡ್ ನಾಯಕರು ಒಂದು ತಾರ್ಕಿಕ ನಿರ್ಧಾರಕ್ಕೆ ಬಂದಿದ್ದಾರೆ, ಶೀಘ್ರದಲ್ಲಿ ಒಂದು ಅಂತಿಮ ನಿರ್ಧಾರ ಪ್ರಕಟಿಸಬಹುದು ಎಂದು ಮಾಹಿತಿ ನೀಡಿದ್ದಾರೆ.

ಮುಖ್ಯಮಂತ್ರಿ ಬದಲಾವಣೆಯೋ ಅಥಾವ ಇನ್ಯಾವ ನಿರ್ಧಾರವೋ ಗೊತ್ತಿಲ್ಲ. ಒಟ್ಟಿನಲ್ಲಿ ಹೈಕಮಾಂಡ್ ಒಂದು ಅಂತಿಮ ತಿರ್ಮಾನಕ್ಕೆ ಬನ್ನಿ ಎಂದು ಹೇಳಿದ್ದೇವೆ, ಅವರು ಪೂರಕವಾಗಿ ಮಾತನಾಡಿದ್ದು, ಆದಷ್ಟು ಬೇಗ ಎಲ್ಲವೂ ಸರಿಯಾಗಬಹುದು, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆ ಮಾಡಿಲ್ಲ ಎಂದು ಹೇಳಿದರು.

Advertisement

Leave a reply

Your email address will not be published. Required fields are marked *

error: Content is protected !!