Select Page

Advertisement

ಜಾರಕಿಹೊಳಿ ಸಹೋದರರ ವಿರುದ್ಧ ಲಿಂಗಾಯತ ನಾಯಕರ ಸಭೆ..?

ಜಾರಕಿಹೊಳಿ ಸಹೋದರರ ವಿರುದ್ಧ ಲಿಂಗಾಯತ ನಾಯಕರ ಸಭೆ..?

ಬೆಳಗಾವಿ : ಡಿಸಿಸಿ ಬ್ಯಾಂಕ್ ಚುನಾವಣೆ ಸೇರಿದಂತೆ ಜಿಲ್ಲಾ ರಾಜಕಾರಣದಲ್ಲಿ ಹಿಡಿತ ಸಾಧಿಸುವ ಉದ್ದೇಶದಿಂದ ಜಿಲ್ಲೆಯ ಲಿಂಗಾಯತ ನಾಯಕರು ಮಹಾರಾಷ್ಟ್ರದ ಮಠವೊಂದರಲ್ಲಿ ಸಭೆ ನಡೆಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ

ಬೆಳಗಾವಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಸಹೋದರರ ಹಿಡಿತದಿಂದ ಲಿಂಗಾಯತ ನಾಯಕರು ಮೂಲೆಗುಂಪು ಆಗುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸುವ ಮೂಲಕ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿಡಿತ ಸಾಧಿಸುವ ಕುರಿತು ಮಾತುಕತೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಈ‌ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಸತೀಶ್ ಜಾರಕಿಹೊಳಿ.
ಕಳೆದ 20 ವರ್ಷಗಳಿಂದ ನಮ್ಮ ವಿರುದ್ಧ ಸಭೆ ನಡೆಯುತ್ತಿವೆ. ರಾಜಕೀಯ ಹಿಡಿತ ಸಾಧಿಸಲು ಅವರು ಸಭೆ ಮಾಡಿರಬಹುದು, ನಮ್ಮ ಒಗ್ಗಟ್ಟನ್ನು ನಾವು ಪ್ರದರ್ಶನ ಮಾಡುತ್ತೇವೆ ಎಂದರು.

ಶನಿವಾರ ತಾಲೂಕಿನ ನಿಡಸೋಶಿಯ ದುರುದುಂಡೇಶ್ವರ ಮಠಕ್ಕೆ ಭೇಟಿನೀಡಿದ ಇವರು, ಜಾರಕಿಹೊಳಿ ಕುಟುಂಬದ ವಿರುದ್ಧ ಲಿಂಗಾಯತ ನಾಯಕರ ಸಭೆ ಕುರಿತು ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಇವರು. ಮಹಾರಾಷ್ಟ್ರದ ಮಠವೊಂದರಲ್ಲಿ ನಮ್ಮ ವಿರುದ್ಧ ಸಭೆ ನಡೆದಿದೆ ಎಂಬ ಮಾಹಿತಿ ಇದೆ. ಇದು ರಾಜಕೀಯದಲ್ಲಿ ಸ್ವಾಭಾವಿಕ. ಇವೆಲ್ಲ ಕೇವಲ ಸಭೆಗೆ ಸೀಮಿತವಷ್ಟೇ, ಪ್ರಾಯೋಗಿಕವಾಗಿ ಜಾರಿಯಾಗಲ್ಲ ಎಂದರು.

Advertisement

Leave a reply

Your email address will not be published. Required fields are marked *

error: Content is protected !!