Select Page

Advertisement

ಚಿಕ್ಕೋಡಿ ಜಿಲ್ಲಾ‌‌ ಕೇಂದ್ರದ ನಿರ್ಧಾರ ಫಿಕ್ಸ್……?

ಚಿಕ್ಕೋಡಿ ಜಿಲ್ಲಾ‌‌ ಕೇಂದ್ರದ ನಿರ್ಧಾರ ಫಿಕ್ಸ್……?

ಚಿಕ್ಕೋಡಿ : ದೊಡ್ಡ ಜಿಲ್ಲೆ ಬೆಳಗಾವಿಯನ್ನು ಎರಡು ಭಾಗವಾಗಿ ವಿಂಗಡಿಸುವ ಮೂಲಕ ಚಿಕ್ಕೋಡಿಯನ್ನು ನೂತನ ಜಿಲ್ಲಾ ಕೇಂದ್ರವನ್ನಾಗಿ ಘೋಷಣೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಈ ಮಧ್ಯೆ ಉಸ್ತುವಾರಿ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ.

ಬೆಳಗಾವಿ ವಿಭಜನೆ ಕುರಿತು ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ. ಚಿಕ್ಕೋಡಿ ಜಿಲ್ಲಾ ರಚನೆಗೆ ಒತ್ತು ನೀಡಲಾಗಿದೆ ಈಗಾಗಲೇ ಸರ್ಕಾರ ಮೇಲೆ ಒತ್ತಡವನ್ನು ಹೇರಲಾಗಿದೆ ಎಲ್ಲದಕ್ಕೂ ಕಾಲ ಕೂಡಿ ಬರಬೇಕು. ಹಣಕಾಸಿನ ವಿಚಾರದಲ್ಲೂ ಕೂಡ ನೋಡಬೇಕು. ಇಲ್ಲಿ ರಾಜಕೀಯ ನಿರ್ಧಾರಗಳು ಆಗಬೇಕು ಎಂದರು.

ಚಿಕ್ಕೋಡಿ ಜಿಲ್ಲಾ ಆಗಬೇಕು ಎಂದು ನಮಗೂ ಆಸೇಯಿದೆ, ಅಥಣಿ ಜಿಲ್ಲಾ ರಚನೆ ಮಾಡುವುದಕ್ಕೆ ಬರುವುದಿಲ್ಲ ಅಥಣಿ ನೂತನ ಜಿಲ್ಲಾ ರಚನೆ ಚಿಕ್ಕೋಡಿ ಆಗುವ ಕುರಿತು ಸರ್ಕಾರದ ಮಟ್ಟದಲ್ಲಿ ಚಿಂತನೆ ಇದೆ ಎಂದು ಈ ಸಂದರ್ಭದಲ್ಲಿ ಭರವಸೆ ನೀಡಿದರು.

ಶಾಸಕ ಮುನಿರತ್ನ ಪ್ರಕರಣದಲ್ಲಿ ನಮ್ಮ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ, ಮುನಿರತ್ನರಿಗೆ ಆ ರೀತಿ ಅವಹೇಳನಕಾರಿ ಪದ ಪ್ರಯೋಗ ಮಾಡು ಅಂತಾ ಯಾರಾದರೂ ಹೇಳಿದ್ದಾರಾ…? ಅವರು ಏನು ಮಾಡಿದ್ದಾರೆ ಎಂಬುದು ಜನಸಾಮಾನ್ಯರು ನೋಡಿದ್ದಾರೆ ಅಲ್ಲವೇ…? ಇಲ್ಲಿ ಯಾರೂ ದ್ವೇಷದ ರಾಜಕಾರಣ ಮಾಡುತಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಮುನಿರತ್ನ ಪ್ರಕರಣ ತನಿಖೆ ನಡೆಯುತ್ತಿದೆ ಯಾರು ತಪ್ಪು ಮಾಡಿದ್ದಾರೆ ಎಂಬುದು ನ್ಯಾಯಾಲಯ ನಿರ್ಧಾರ ಮಾಡುತ್ತದೆ.
ಈಗಾಗಲೇ ಪ್ರಕರಣ ದಾಖಲು ಮಾಡಿದ್ದಾರೆ ಅದರ ಪ್ರಕಾರ ಪೊಲೀಸರು ತನಿಖೆ ಮಾಡುತ್ತಾರೆ ಎಂದು ಹೇಳಿದರು.

ಕೃಷ್ಣಾ ನದಿ ಪ್ರವಾಹ ಬೆಳೆ ಹಾನಿ ಪರಿಹಾರ ವಿಚಾರವಾಗಿ ಮಾತನಾಡಿ ಇದರಲ್ಲಿ ತುಂಬಾ ಬೆಳೆಗಳು ಹಾನಿ ಸಂಭವಿಸಿದೆ. “ಕಬ್ಬು ಬೆಳೆಗಳಿಗೆ ಪರಿಹಾರ ಕೊಡುವುದಕ್ಕೆ ಬರುವುದಿಲ್ಲ”
ಕಬ್ಬಿನ ಬೆಳೆ ಕಮರ್ಷಿಯಲ್ ಬೆಳೆ ಇರುದರಿಂದ ಕೊಡುವುದಕ್ಕೆ ಬರುದಿಲ್ಲ.

ಇನ್ನು ಹಲವು ಬೆಳೆಗಳು ಸರ್ವೆ ಕಾರ್ಯ ಆಗಬೇಕು. ಇನ್ನು ನೀರು ಇರುವುದರಿಂದ ಸರ್ವೇ ಕಾರ್ಯ ವಿಳಂಬವಾಗುತ್ತಿದೆ, ಸರ್ಕಾರ ನಿಯಮದ ಪ್ರಕಾರ ಹಣ ಬರುತ್ತದೆ ಎಂದು ಬರವಸೆ ನೀಡಿದರು.

Advertisement

Leave a reply

Your email address will not be published. Required fields are marked *

error: Content is protected !!