ಅಂಬಲಿಯಲ್ಲಿ ನಿದ್ರೆ ಮಾತ್ರೆ ಬೆರಸಿ ಉದ್ಯಮಿ ಕೊಲೆ ; ಉಮಾಳ ಕರಾಳ ಮುಖ ಬಯಲಿಗೆ
ಬೆಳಗಾವಿ : ತನ್ನ ತಂದೆಯ ಸಾವು ಅನುಮಾನ ಹುಟ್ಟುಹಾಕಿದೆ ಎಂದು ಆರೋಪಿಸಿ ಸಂತೋಷ್ ಪದ್ಮಣ್ಣವರ ಪುತ್ರಿ ಸಂಜನಾ ಕೊಟ್ಟ ದೂರು ಆಧರಿಸಿ ಕೇವಲ 48 ಗಂಟೆಗಳಲ್ಲಿ ಕೊಲೆ ಪ್ರಕರಣ ಹೊರಹಾಕುವಲ್ಲಿ ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಉದ್ಯಮಿ ಸಂತೋಷ್ ಪದ್ಮಣ್ಣವರ ಸಾವಿಗೆ ಆತನ ಪತ್ನಿ ಉಮಾ ಪದ್ಮಣ್ಣವರ ಹಾಗೂ ಫೇಸ್‌ಬುಕ್ ಸ್ನೇಹಿತ ಶೋಬೇಶ್ ಗೌಡ ಹಾಗೂ ಆತನ ಗೆಳೆಯ ಪವನ್ ಎಂಬಾತನೇ ಕಾರಣ ಎಂದು ಪೊಲೀಸರ ತನಿಖೆಯಿಂದ ಬಯಲಾಗಿದೆ. ಹಾಗೆಯೇ ಉದ್ಯಮಿಯನ್ನು ಆರೋಪಿಗಳು ಭೀಕರವಾಗಿ ಹತ್ಯೆ ಮಾಡಿದ್ದು ತಿಳಿದುಬಂದಿದೆ.
ಅಕ್ಟೋಬರ್. 9 ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ ಎನ್ನಲಾದ ಉದ್ಯಮಿ ಸಂತೋಷ್ ಪದ್ಮಣ್ಣವರ್ ಅವರ ಸಾವಿನ ಹಿಂದೆ ಕಾಣದ ಕೈಗಳ ಕೈವಾಡ ಇದ್ದು ತಂದೆಯ ಸಾವಿನ ಕುರಿತು ತನಿಖೆ ನಡೆಸಬೇಕೆಂದು ಆಗ್ರಹಿಸಿ ಸಂಜನಾ
ಪದ್ಮಣ್ಣವರ್ ಬುಧವಾರ ನಗರದ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದ್ದರು.
ಸಂತೋಷ್ ಗೆ ಪತ್ನಿ ಉಮಾ ಅಂಬಲಿಯಲ್ಲಿ ನಿದ್ರೆ ಮಾತ್ರೆ ಕೊಟ್ಟಿದ್ದಾಳೆ. ಆತನ ಪ್ರಜ್ಞೆ ತಪ್ಪಿದ ನಂತರ ಉಸಿರುಗಟ್ಟಿಸಿ ಕೊಲೆ ಮಾಡಲು ಯತ್ನಿಸಿದ್ದಾಳೆ. ಆದರೆ ಈ ಸಂದರ್ಭದಲ್ಲಿ ಸತೋಷ್ ಸತ್ತಿಲ್ಲ. ಇದರಿಂದ ಭಯಗೊಂಡ ಉಮಾ ತನ್ನ ಫೇಸ್‌ಬುಕ್ ಸ್ನೇಹಿತ ಶೋಭಿತ್ ಗೌಡನನ್ನು ಕರೆಸಿಕೊಂಡಿದ್ದಾಳೆ. ಜೊತೆಗ ಶೋಭಿತ್ ಹೆಳೆಯ ಪವನ್ ಕೂಡಾ ಬಂದಿದ್ದಾರೆ.
ನಂತರ ಮೂವರು ಸೇರಿ ಸಂತೋಷ್ ನನ್ನು ಕೊಲೆ ಮಾಡಿ ಹೃದಯಾಘಾತದಿಂದ ಸತ್ತಿದ್ದಾಗಿ ಬಿಂಬಿಸಿದ್ದಾರೆ. ನಂತರ ಇಬ್ಬರು ಆರೋಪಿಗಳು ಬೆಳಗಾವಿಯಿಂದ ಕಾಲ್ಕಿತ್ತಿದ್ದಾರೆ. ನಂತರ ಶೋಭಿತ್ ಹಾಗೂ ಪವನ್ ನನ್ನು ಹುಬ್ಬಳ್ಳಿಯಲ್ಲಿ ಯಶಕ್ಕೆ ಪಡೆದಿದ್ದಾರ. ಇತ್ತ ಉಮಾ ಕೂಡಾ ಗಂಡನ ಕೊಲೆ ಮಾಡಿದ್ದು ಒಪ್ಪಿಕೊಂಡಿದ್ದಾಳೆ.
ಪುತ್ರಿ ಕೊಟ್ಟ ಆ ಒಂದು ದೂರಿನಿಂದ ತಂದೆಯ ಸಾವಿನ ಕಾರಣ ಹೊರಬಿದ್ದಿದೆ. ಹಾಗೆಯೇ ಪತ್ನಿಯ ಕರಾಳ ಮುಖ ಬಯಲಾಗಿದೆ.


