Select Page

ಆರೋಗ್ಯ ರಕ್ಷಾ ಸಮಿತಿ ನೂತನ ಪದಾಧಿಕಾರಿಗಳ ಪದಗ್ರಹಣ

ಆರೋಗ್ಯ ರಕ್ಷಾ ಸಮಿತಿ ನೂತನ ಪದಾಧಿಕಾರಿಗಳ ಪದಗ್ರಹಣ



ಮುಗಳಖೋಡ : ಸರಕಾರಿ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಉತ್ತಮ ವೈದ್ಯಕೀಯ ಸೇವೆ ನೀಡುವುದು ನಮ್ಮ ಮೂಲಭೂತ ಕರ್ತವ್ಯವಾಗಿದೆ. ಸಾರ್ವಜನಿಕರ ಕುಂದು ಕೊರತೆ ಆಲಿಸುವ ಜವಾಬ್ದಾರಿ ಆರೋಗ್ಯ ರಕ್ಷಾ ಸಮಿತಿಯದ್ದಾಗಿದ್ದು, ಪದಾಧಿಕಾರಿಗಳು ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಲಿ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಎಸ್.ಎಂ ಪಾಟೀಲ್ ಅಭಿಪ್ರಾಯಪಟ್ಟರು.

ಮುಗಳಖೋಡ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದ ಸರ್ಕಾರದಿಂದ ಆರೋಗ್ಯ ರಕ್ಷಾ ಸಮಿತಿಗೆ ನಾಮನಿರ್ದೇಶನ ಸದಸ್ಯರಾಗಿ ಆಯ್ಕೆಯಾದ ಪದಾಧಿಕಾರಿಗಳ ಪದಗ್ರಹಣ ಸಭೆಯಲ್ಲಿ ಮಾತನಾಡಿದರು.
ನಾಮ ನಿರ್ದೇಶನ ಸದಸ್ಯರೊಂದಿಗೆ, ಆರೋಗ್ಯ ಸಿಬ್ಬಂದಿಯವರು ಸೇರಿಕೊಂಡು ಸಾರ್ವಜನಿಕರ ಕುಂದು ಕೊರತೆ ಬಗ್ಗೆ ಸಾಮಾನ್ಯ ಸಭೆ ಕರೆದು ಆಸ್ಪತ್ರೆಯ ಉನ್ನತೀಕರಣಕ್ಕಾಗಿ ಶ್ರಮಿಸಬೇಕು ಎಂದರು.

ಆರೋಗ್ಯ ರಕ್ಷಣಾ ರಕ್ಷಾ ಸಮಿತಿ ನಾಮನಿರ್ದೇಶನ ಸದಸ್ಯ ಸಂತೋಷ ಅರಭಾವಿ ಸನ್ಮಾನ ಸ್ವೀಕರಿಸಿ ಮಾತನಾಡಿ. ಸರ್ಕಾರಿ ಆಸ್ಪತ್ರೆಗಳನ್ನು ಯಾರು ಕೀಳಾಗಿ ಕಾಣಬಾರದು . ಖಾಸಗಿ ಆಸ್ಪತ್ರೆಯಲ್ಲಿ ಸಿಗುವಂತ ಸೌಲಭ್ಯಗಳು ಸರ್ಕಾರ ಆಸ್ಪತ್ರೆಯಲ್ಲಿ ಸಿಗುತ್ತವೆ. ಸಮುದಾಯ ಆರೋಗ್ಯ ಕೇಂದ್ರವನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಎಲ್ಲರೂ ಒಟ್ಟಾಗಿ ಶ್ರಮಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಮುಗಳಖೋಡ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆರೋಗ್ಯ ರಕ್ಷಾ ಸಮಿತಿಗೆ ನಾಮನಿರ್ದೇಶನ ಪದಾಧಿಕಾರಿಗಳಾಗಿ ನೇಮಕವಾದ ಸಂತೋಷ ಅರಭಾವಿ, ಹನುಮಂತ ಅಳಗವಾಡಿ ಹಾಗೂ ಲಾಲಸಾಬ್ ತಹಶೀಲ್ದಾರ್ ಅವರನ್ನು ಅಧಿಕಾರಿಗಳು ಶಾಲು ಹೊದಿಸಿ ಗೌರವಿಸಿ, ಸನ್ಮಾನಿಸಿದರು.

ಈ ಸಂದರ್ಭದಲ್ಲಿ ರಾಯಬಾಗ ತಹಶೀಲ್ದಾರ್ ಮಹಾದೇವ ಸಣಮುರಿ, ತಾಲೂಕು ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷ, ತಾಪಂ ಇಒ ಡಾ. ಸುರೇಶ ಕದ್ದು, ಬಿಇಓ ಬಸವರಾಜಪ್ಪ.ಆರ್, ಪಿಡಬ್ಲೂಡಿ ಎಇಇ ಎ.ಆರ್.ಮನವಡ್ಡರ, ಮುಗಳಖೋಡ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯಾಧಿಕಾರಿ ಡಾ. ಆರ್.ಎಸ್.ರಂಗಣ್ಣವರ, ಡಾ. ಆರ್.ಎ.ಮೇಲಾಪುರೆ, ಡಾ. ಹೇಮಲತಾ ಪಾಟೀಲ, ಅಂಗನವಾಡಿ ಮೇಲ್ವಿಚಾರಕಿ ಸೂರ್ಯವಂಶಿ, ಆಹಾರ ನಿರೀಕ್ಷಕ ಶರಣಪ್ಪ ಬಾಗೇವಾಡಿ, ಕುಡಚಿ ಕಂದಾಯ ನಿರೀಕ್ಷಕ ರಾಜು ದಾನೋಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


Advertisement

Leave a reply

Your email address will not be published. Required fields are marked *

error: Content is protected !!