Select Page

RSS ಪಥಸಂಚಲನದಲ್ಲಿ ಭಾಗವಹಿಸಿದ ವಿದ್ಯಾರ್ಥಿಗೆ ಶಿಕ್ಷೆ ; ನನ್ನಿಂದ ತಪ್ಪಾಗಿದೆ ಕ್ಷಮಿಸಿ ಎಂದ ಶಿಕ್ಷಕಿ

RSS ಪಥಸಂಚಲನದಲ್ಲಿ ಭಾಗವಹಿಸಿದ ವಿದ್ಯಾರ್ಥಿಗೆ ಶಿಕ್ಷೆ ; ನನ್ನಿಂದ ತಪ್ಪಾಗಿದೆ ಕ್ಷಮಿಸಿ ಎಂದ ಶಿಕ್ಷಕಿ

ಬೆಳಗಾವಿ : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥಸಂಚಲನದಲ್ಲಿ ಭಾಗವಹಿಸಿದ್ದ ಖಾಸಗಿ ಶಾಲಾ ವಿದ್ಯಾರ್ಥಿಗೆ ಶಿಕ್ಷೆ ನೀಡಿರುವ ಘಟನೆ ಹಿನ್ನಲೆಯಲ್ಲಿ ನನ್ನಿಂದ ತಪ್ಪಾಗಿದೆ ದಯವಿಟ್ಟು ಕ್ಷಮಿಸಿ ಎಂದು ಶಿಕ್ಷಕಿ ಕ್ಷಮೆ ಕೇಳಿದ್ದಾರೆ.

ನಾನು ಯಾವುದೇ ಅವಮಾನಕಾರಿ ಟಿಪ್ಪಣಿ ಮಾಡಿಲ್ಲ. ಯಾವುದೇ ವಿದ್ಯಾರ್ಥಿ, ಸಮುದಾಯ, ಸಂಸ್ಥೆ ಅಥವಾ ಮಗುವಿನ ಭಾವನೆಗಳಿಗೆ ನೋವುಂಟು ಮಾಡುವ, ಹಾನಿ ಮಾಡುವ ಉದ್ದೇಶ ನನ್ನದಲ್ಲ.

ಯಾರಾದರೂ ಭಾವನೆಗೆ ನೋವುಂಟಾದರೆ ಅದರ ಕುರಿತು ನನಗೆ ತುಂಬಾ ವಿಷಾದವಿದೆ. ಮತ್ತು ಕ್ಷಮೆಯಾಚಿಸುತ್ತೇನೆ. ಭವಿಷ್ಯದದಲ್ಲಿ ಇಂತಹ ಘಟನೆ ಮರುಕಳಿಸದಂತೆ ಖಚಿತಪಡಿಸುತ್ತೇನೆ. ಆಂಗ್ಲ ಮಾಧ್ಯಮ ಶಾಲೆ ಶಿಕ್ಷಕಿ ಕಾವೇರಿ ಎಂದು ಕ್ಷಮಾಪಣಾ ಪತ್ರ ಕಳುಹಿಸಿದ್ದಾರೆ.

ಏನಿದು ಘಟನೆ : ಪ್ರತಿಷ್ಠಿತ ಖಾಸಗಿ ಶಾಲೆಯೊಂದರ ವಿದ್ಯಾರ್ಥಿ ಕಳೆದ ಭಾನುವಾರ ಬೆಳಗಾವಿ ನಗರದಲ್ಲಿ ಆಯೋಜಿಸಲಾಗಿದ್ದ ಆರ್ ಎಸ್ ಎಸ್ ಪಥಸಂಚಲನದಲ್ಲಿ ಭಾಗವಹಿಸಿದ್ದ. ಮರುದಿನ ಶಾಲೆಗೆ ಹೋದ ವೇಳೆ ಶಿಕ್ಷಕಿ ವಿದ್ಯಾರ್ಥಿಯ ಗಣವೇಶದ ಫೋಟೋಗಳನ್ನು ಸಾರ್ವಜನಿಕವಾಗಿ ತೋರಿಸಿ ಅವಮಾನ ಮಾಡಿದ್ದಲ್ಲದೆ, ತರಗತಿಯಿಂದ ಆಚೆ ಹಾಕಿ ಶಿಕ್ಷೆ ನೀಡಿದ್ದರು.

ಪಥಸಂಚಲನದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗೆ ಅವಮಾನಿಸಿದ ಘಟನೆಯನ್ನು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ಡಾ. ಸೋನಾಲಿ ಸರ್ನೋಬತ್ ತೀವ್ರವಾಗಿ ಖಂಡಿಸಿದ್ದಾರೆ. ಅವಮಾನಿಸಿ ಶಿಕ್ಷಕಿ ಕಾವೇರಿ ಎಂಬುವವರು ಸಾರ್ವಜನಿಕವಾಗಿ ಕ್ಷಮೆ ಕೋರುವಂತೆ ಆಗ್ರಹಿಸಿದ್ದರು.


Advertisement

Leave a reply

Your email address will not be published. Required fields are marked *

error: Content is protected !!