ಅತಿಥಿ ಗೃಹದಲ್ಲಿದ್ದ ಸಾಮಗ್ರಿ ನಾಪತ್ತೆ ; ರೋಹಿಣಿ ಸಿಂಧೂರಿ ವೇತನದಲ್ಲೇ ಮೊತ್ತ ಭರಿಸುವಂತೆ ಮನವಿ
ಮೈಸೂರು : ಜಿಲ್ಲಾಧಿಕಾರಿಯಾಗಿದ್ದಾಗ ರೋಹಿಣಿ ಸಿಂಧೂರಿ ವಾಸವಿದ್ದ ಅತಿಥಿ ಗೃಹದಲ್ಲಿನ ಸಾಮಗ್ರಿಗಳು ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಅವರ ವೇತನದಲ್ಲಿಯೇ ಮೊತ್ತವನ್ನು ಕಡಿತಗೊಳಿಸುವಂತೆ ಸರ್ಕಾರದ ಕಾರ್ಯದರ್ಶಿಗೆ ಆಡಳಿತ ತರಬೇತಿ ಸಂಸ್ಥೆ (ಎಟಿಐ) ಮನವಿ ಮಾಡಿದೆ.
ಹೌದು ಐಪಿಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರಿ ಮೈಸೂರು ಜಿಲ್ಲಾಧಿಕಾರಿ ಇದ್ದ ಸಂದರ್ಭದಲ್ಲಿ ವಾಸವಿದ್ದ ಅತಿಥಿ ಗೃಹದಲ್ಲಿನ ಸಾಮಗ್ರಿಗಳು ನಾಪತ್ತೆಯಾಗಿದ್ದವು. ಸುಮಾರು 77 ಸಾವಿರ 292 ರೂ. ಮೌಲ್ಯದ ಸಾಮಗ್ರಿಗಳು ನಾಪತ್ತೆ ಆಗಿದ್ದವು. ಸಧ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಳಿತ ತರಬೇತಿ ಸಂಸ್ಥೆ ಸರ್ಕಾರದ ಕಾರ್ಯದರ್ಶಿಗೆ ಪತ್ರ ಬರೆದಿದೆ.
ಮೈಸೂರಿಗೆ ಜಿಲ್ಲಾಧಿಕಾರಿಯಾಗಿ ವರ್ಗವಾಗಿ ಬಂದ ನಂತರ 2020 ಅಕ್ಟೋಬರ್ 2ರಿಂದ ನವೆಂಬರ್ 14ರ ತನಕ ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಆವರಣದಲ್ಲಿರುವ ಅತಿಥಿ ಗೃಹದಲ್ಲಿವಾಸ್ತವ್ಯ ಇದ್ದರು. ಅತಿಥಿಗೃಹವನ್ನು ತೆರವುಧ
ಗೊಳಿಸಿದಾಗ ಅಲ್ಲಿದ್ದ ಬೆಲೆಬಾಳುವ ವಸ್ತುಗಳು ಇರಲಿಲ್ಲ.
ಇದರಿಂದಾಗಿ ರೋಹಿಣಿ ಸಿಂಧೂರಿ ಅವರು ಕಾರ್ಯನಿರ್ವಹಿಸುತ್ತಿದ್ದ ಜಿಲ್ಲಾಧಿಕಾರಿ ಕಚೇರಿಗೆ 2020ರ ಡಿಸೆಂಬರ್ 16, 2021ರ ಜನವರಿ 8 ಹಾಗೂ ಅದೇ ವರ್ಷ ಏಪ್ರಿಲ್ 12ರಂದು ಪತ್ರ ಬರೆದು ಸಂಸ್ಥೆಯ ಸಾಮಗ್ರಿಗಳನ್ನು ಹಿಂತಿರುಗಿಸುವಂತೆ ಸೂಚನೆ ನೀಡಲಾಗಿತ್ತು. ಆದರೆ, ರೋಹಿಣಿ ಸಿಂಧೂರಿ ಯಾವುದೇ ಮಾಹಿತಿ ನೀಡಿರಲಿಲ್ಲ


