Select Page

Advertisement

ನಮ್ಮ ಮನೆ ಮಕ್ಕಳು ಸತ್ತಂತೆ ಆಗಿದೆ ; ಕಾಲ್ತುಳಿತ ಘಟನೆ ನೆನೆದು ಡಿಕೆಶಿ ಕಣ್ಣೀರು

ನಮ್ಮ ಮನೆ ಮಕ್ಕಳು ಸತ್ತಂತೆ ಆಗಿದೆ ; ಕಾಲ್ತುಳಿತ ಘಟನೆ ನೆನೆದು ಡಿಕೆಶಿ ಕಣ್ಣೀರು

ಬೆಂಗಳೂರು : ಇಷ್ಟು ಜನ ಸೇರುತ್ತಾರೆ ಎಂಬ ನಿರೀಕ್ಷೆ ಇರಲಿಲ್ಲ. ವಿಪಕ್ಷಗಳು ರಾಜಕಾರಣ ಮಾಡುತ್ತಿದೆ. ನಮ್ಮ ಮನೆಯ ಮಕ್ಕಳು ಸತ್ತಂತೆ ಆಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕಣ್ಣೀರು ಹಾಕಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇವರು. ಕೆಟ್ಟ ರಾಜಕಾರಣದ ಕುರಿತು ಚರ್ಚೆ ಮಾಡಲ್ಲ. ಎಲ್ಲದಕ್ಕೂ ನಾವೇ ಹೊಣೆ ಹೊತ್ತುಕೊಳ್ಳುತ್ತೇವೆ. ಬಿಜೆಪಿ ಹಾಗೂ ಜೆಡಿಎಸ್ ಅಜೆಂಡಾ ಕುರಿತು ಮುಂದೆ ಮಾತನಾಡುತ್ತೇವೆ ಎಂದರು.

ಸಣ್ಣ ಮಕ್ಕಳು ಸತ್ತಿದ್ದು ನೋವು ತರಿಸಿದೆ. ಯಾವ ಮಕ್ಕಳ ಸಾವನ್ನೂ ಮನೆಯವರು ಅರಗಿಸಿಕೊಳ್ಳಲು ಸಾಧ್ಯವಾಗಲ್ಲ.
ಕಮಿಷನರ್ ಘಟನೆ ಕುರಿತು ಹೇಳಿದಂತೆ ಕೇವಲ ಹತ್ತು ನಿಮಿಷದಲ್ಲಿ ಕಾರ್ಯಕ್ರಮ ಮೊಟಕುಗೊಳಿಸಿದ್ದೆವೆ ಎಂದರು.


Advertisement

Leave a reply

Your email address will not be published. Required fields are marked *

error: Content is protected !!