ರಾಯಬಾಗದಲ್ಲಿ ಸರಕಾರಿ ಆಸ್ತಿ ಉಳಿಸಿ ಸ್ವಾಮಿ : ಶಾಸಕ ಐಹೊಳೆ ಮನವಿ ಮಾಡಿದ್ದೇನು…?
ರಾಯಬಾಗ : ರಾಯಬಾಗ ತಾಲೂಕಿನಲ್ಲಿ ಸರಕಾರಿ ಆಸ್ತಿಗೆ ರಕ್ಷಣೆ ಇಲ್ಲವಾ ಎಂಬ ಅನುಮಾನ ಮೂಡಿದೆ. ಕೆಡಿಪಿ ಸಭೆಯಲ್ಲಿ ಸ್ವತಃ ಕ್ಷೇತ್ರದ ಶಾಸಕರೇ ಅಧಿಕಾರಿಗಳು ಹಾಗೂ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದು ವಿಭಿನ್ನವಾಗಿತ್ತು.
ರಾಯಬಾಗ ಶಾಸಕರಾದ ಧುರ್ಯೋಧನ ಐಹೊಳೆ ಮಾತನಾಡಿ. ರಾಯಬಾಗದಲ್ಲಿನ ಸರಕಾರಿ ಆಸ್ತಿ ಕಬಳಿಸಿದವರ ವಿರುದ್ಧ ದೂರು ದಾಖಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಲ್ಲದೇ ಸರಕಾರಿ ಆಸ್ತಿಗೆ ಕಾಂಪೌಂಡ್ ನಿರ್ಮಿಸಲು ತಿಳಿಸಿದರು.
ತಮ್ಮ ಕ್ಷೇತ್ರದ ಅಂಗನವಾಡಿ ಕೇಂದ್ರಗಳಲ್ಲಿ ಆಹಾರ ಸಾಮಗ್ರಿಗಳ ಪೂರೈಕೆ ಸಮರ್ಪಕವಾಗಿ ಅಗದೇ ಇರುವುದರ ಕುರಿತು ಸಭೆಯಲ್ಲಿ ಗಮನ ಸೆಳೆದರು. ಜೊತೆಗೆ ಅಧಿಕಾರಿಗಳು ಸಮರ್ಪಕವಾಗಿ ಸಮಸ್ಯೆ ಬಹೆಹರಿಸಲು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ರಾಯಬಾಗದಲ್ಲಿ ಸರಕಾರಿ ಆಸ್ತಿ ಮೇಲಿನ ನ್ಯಾಯಾಲಯದಲ್ಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತಡೆಯಾಜ್ಞೆ ತೆಗೆಸಲು ಕ್ರಮ ಕೈಗೊಳ್ಳಲಾಗುವದು ಎಂದು ತಿಳಿಸಿದರು.


