Select Page

Advertisement

ಅಪ್ರಾಪ್ತ ಬಾಲಕಿಗೆ ಮದುವೆ ಮಾಡಿಸಿದ ಐಪಿಎಸ್ ಅಧಿಕಾರಿ ; ಅಮಾನವೀಯ ಕೃತ್ಯ ಬೆಳಕಿಗೆ

ಅಪ್ರಾಪ್ತ ಬಾಲಕಿಗೆ ಮದುವೆ ಮಾಡಿಸಿದ ಐಪಿಎಸ್ ಅಧಿಕಾರಿ ; ಅಮಾನವೀಯ ಕೃತ್ಯ ಬೆಳಕಿಗೆ

ಬೆಳಗಾವಿ : ಕಾನೂನು ರಕ್ಷಣೆ ಮಾಡಬೇಕಿದ್ದ ಐಪಿಎಸ್ ಅಧಿಕಾರಿಯೇ ಅಧಿಕಾರದ ಅಹಂಕಾರದಿಂದ ತಾನೇ ಮುಂದೆನಿಂತು ಅಪ್ರಾಪ್ತ ಬಾಲಕಿಗೆ ಮದುವೆ ಮಾಡಿಸಿರುವ ಘಟನೆ ಬೆಳಕಿಗೆ ಬಂದಿದೆ.

ಹೌದು ಬೆಳಗಾವಿ ವಿಭಾಗದ ಮಾನವ ಹಕ್ಕುಗಳ ಜಾರಿ ನಿರ್ದೇಶನಾಲಯದ ಪೊಲೀಸ್ ವರಿಷ್ಠಾಧಿಕಾರಿ ರವೀಂದ್ರ ಗದಾಡಿ ಮುಂದೆ ನಿಂತು ಅಪ್ರಾಪ್ತ ಬಾಲಕಿಗೆ ಮದುವೆ ಮಾಡಿಸಿದ್ದಾರೆ. ಅಧಿಕಾರದ ಪ್ರಭಾವ ಬೀರಿ ಈ ರೀತಿಯ ಕೃತ್ಯ ಎಸಗಿದ್ದು ಬೆಳಕಿಗೆ ಬಂದಿದೆ.

ಅಥಣಿ ತಾಲೂಕಿನ ಐಗಳಿ ಗ್ರಾಮದ ಖಾಸಗಿ ಫಾರ್ಮ್‌ ಹೌಸ್‌ನಲ್ಲಿ ವಿವಾಹ ಸಮಾರಂಭ ನಡೆದಿದೆ. ಅಪ್ರಾಪ್ತೆಯ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿದ್ದು 2023 ರಲ್ಲಿ ಸೋದರ ಸಂಬಂಧಿ ಜೊತೆ ಮದುವೆ ಮಾಡಿಸಿದ್ದಾರೆ.

ಅಪ್ರಾಪ್ತೆಯ ಮೂಲ ಜನ್ಮ ದಿನಾಂಕ 1-06-2008 ತಮ್ಮ ಪ್ರಭಾವ ಬೀರಿ ಜನ್ಮ ದಿನಾಂಕವನ್ನು 1-06- 2002 ಎಂದು ತಿದ್ದುಪಡಿ ಮಾಡಿದ ಆರೋಪ ಕೇಳಿಬಂದಿದೆ. ಹೈಸ್ಕೂಲ್ ನಲ್ಲಿ ಓದಬೇಕಿದ್ದ ಬಾಲಕಿ ಸಧ್ಯ ಮೂರು ತಿಂಗಳು ಗರ್ಭಿಣಿಯಾಗಿದ್ದಾಳೆ.

Advertisement

Leave a reply

Your email address will not be published. Required fields are marked *

error: Content is protected !!