ಒಂದಾದ ಜೋಡೆತ್ತು ; ಕತ್ತಿಗೆ ಜೈಕಾರ, ಜೊಲ್ಲೆಗೆ ಮುಖಭಂಗ
ಹುಕ್ಕೇರಿ : ಯಾವ ಕಾರ್ಖಾನೆ ಅಧಿಕಾರಕ್ಕಾಗಿ ಮೂರು ದಶಕಗಳಿಂದ ದೂರ ಆಗಿದ್ದರು ಈಗ ಅದೇ ಜೋಡೆತ್ತುಗಳು ಒಂದಾಗಿವೆ. ಬರುವ ಹಂಗಾಮಿನಲ್ಲಿ ನಮ್ಮದೇ ನೇತೃತ್ವದಲ್ಲಿ ಕಾರ್ಖಾನೆ ಕಬ್ಬು ನುರಿಸಲಿದೆ ಎಂದು ಘೋಷಣೆ ಮಾಡಿದರು.
ಮಾಜಿ ಸಂಸದ ರಮೇಶ್ ಕತ್ತಿ ಹಾಗೂ ಮಾಜಿ ಸಚಿವ ಎ.ಬಿ ಪಟೀಲ್ ಅವರು ತಮ್ಮ ಹಳೇ ಸಿಟ್ಟು ಮರೆತು ಒಂದಾಗಿದ್ದಾರೆ. ಕಾರ್ಖಾನೆ ನಿರ್ದೇಶಕರನ್ನು ಸೆಳೆದು ಅಧಿಕಾರ ಹಿಡಿದಿದ್ದ ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆಗೆ ಮುಖಭಂಗವಾಗಿದೆ.
ರಾಜಕೀಯ ಎದುರಾಳಿಗಳಾಗಿದ್ದ ಕತ್ತಿ ಹಾಗೂ ಪಾಟೀಲ ಕುಟುಂಬ ಮೂರು ದಶಕಗಳ ಬಳಿಕ ಒಂದಾಗಿವೆ. ಈ ಬೆಳವಣಿಗೆಯಿಂದ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ ಸರ್ವ ಸದಸ್ಯರು ಒಗ್ಗಟ್ಟಿನ ಮಂತ್ರ ಜಪಿಸಿದ್ದು ಮರಳಿ ಕಾರ್ಖಾನೆ ಅಧಿಕಾರ ಕತ್ತಿ ತೆಕ್ಕೆಗೆ ಬಂದಿದೆ.
ಸೋಮವಾರ ಮಾಜಿ ಸಂಸದ ರಮೇಶ್ ಕತ್ತಿ, ಮಾಜಿ ಸಚಿವ ಎ.ಬಿ ಪಾಟೀಲ, ಶಾಸಕ ನಿಖಿಲ್ ಕತ್ತಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮುಂಬರುವ ಹಂಗಾಮು ನಮ್ಮ ನೇತೃತ್ವದಲ್ಲಿ ನಡೆಯಲಿದೆ ಎಂದು ಘೋಷಣೆ ಮಾಡಿದರು.
ಈ ವೇಳೆ ಮಾತನಾಡಿದ ಎ.ಬಿ ಪಾಟೀಲ್ ಸಹಕಾರ ಸಂಘ ಉಳಿಸಲು ನಾವು ವೈಯಕ್ತಿಕ ಜಗಳ ಮರೆತು ಒಂದಾಗಿದ್ದೇವೆ. ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ ಉಪಕಾರ ನಮ್ಮ ಕುಟುಂಬದ ಮೇಲೆ ಸಾಕಷ್ಟು ಇದೆ. ನಮ್ಮ ರಾಜಕೀಯ ಸಿದ್ಧಾಂತ ಬೇರೆ, ಕಾರ್ಖಾನೆ ಆಡಳಿತವೇ ಬೇರೆ ಎಂದರು.


